ಚಾಮರಾಜನಗರ : ಕೊರೋನಾ ಲಸಿಕೆ ಪಡೆದ ಐವರು ವೈದ್ಯರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಘಟನೆ ಚಾಮರಾಜನಗರದಲ್ಲಿ ನಡೆದಿದೆ.
ಜೊತೆಗೆ ಇಬ್ಬರು ಕೊರೋನಾ ವಾರಿಯರ್ಸ್ ಗಳಲ್ಲೂ ಸೋಂಕು ಕಾಣಿಸಿಕೊಂಡಿದೆ.

ಈ ಪೈಕಿ ಇಬ್ಬರು ವೈದ್ಯರು ಕೋವಿ ಶೀಲ್ಡ್ ಹಾಗೂ ಮೂವರು ಕೋವಾಕ್ಸಿನ್ ಲಸಿಕೆ ಪಡೆದಿದ್ದರು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರವಿ ಹೇಳಿದ್ದಾರೆ.
ಇದೀಗ ನಾಲ್ವರು ವೈದ್ಯರನ್ನು ಹೋಮ್ ಐಸೋಲೇಷನ್ ನಲ್ಲಿ ಇರಿಸಲಾಗಿದ್ದು, ಒಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನುಳಿದ ಇಬ್ಬರು ಕೊರೋನಾ ವಾರಿಯರ್ಸ್ ಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೋನಾ ಲಸಿಕೆ ಪಡೆದ ಬಳಿಕವೂ ಸೋಂಕು ಕಾಣಿಸಿಕೊಂಡಿದೆ ಎಂದು ಗಾಬರಿಯಾಗುವ ಅಗತ್ಯವಿಲ್ಲ.

ಎರಡು ಡೋಸ್ ಲಸಿಕೆ ಪಡೆದ 6 ವಾರಗಳ ಬಳಿಕವೇ ದೇಹದಲ್ಲಿ ಕೊರೋನಾ ವಿರುದ್ಧ ಹೋರಾಡುವ ಶಕ್ತಿ ಬೆಳೆಯುತ್ತದೆ ಎಂದು ಹೇಳಲಾಗಿದೆ. ಅಂದರೆ ಮೊದಲ ಡೋಸ್ ಪಡೆದ 3 ರಿಂದ 4 ತಿಂಗಳ ಕಾಲ ಮುನ್ನೆಚ್ಚರಕೆ ವಹಿಸುವುದು ಅಗತ್ಯ.
ಹೀಗಾಗಿ ಕೊರೋನಾ ಲಸಿಕೆ ಪಡೆದ ವೈದ್ಯರಿಗೆ ಸೋಂಕು ಕಾಣಿಸಿಕೊಂಡಿದೆ ಇನ್ನು ನಮ್ಮ ಕಥೆ ಎನಪ್ಪ ಎಂದು ಗಾಬರಿಯಾಗುವ ಅಗತ್ಯವಿಲ್ಲ. ಎರಡು ಡೋಸ್ ಗಳನ್ನು ಪಡೆದ ಎಲ್ಲರೂ ಕೊರೋನಾ ಸೋಂಕಿನ ವಿರುದ್ಧ ಗೆದ್ದಿರುವುದನ್ನು ಸಂಶೋಧನೆಗಳು ಸಾಬೀತುಪಡಿಸಿವೆ.
Discussion about this post