ಮಂಗಳೂರು : ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬನ ಮೇಲೆ ragging ಮಾಡಿದ ದೂರಿನ ಆಧಾರದಲ್ಲಿ 9 ವಿದ್ಯಾರ್ಥಿಗಳನ್ನು ಮಂಗಳೂರು ನಗರ ಪೊಲೀಸರು ನಿನ್ನೆ ಬಂಧಿಸಿದ್ದರು.
ಶ್ರೀನಿವಾಸ್ ಕಾಲೇಜಿನಲ್ಲಿ Ragging.. ಪ್ಯಾಂಟ್ ಹಾಕೋಕೂ ಬಿಡದೆ 9 ವಿದ್ಯಾರ್ಥಿಗಳನ್ನು ಎತ್ತಾಕ್ಕೊಂಡು ಬಂದ ಪೊಲೀಸರು…
ಬಂಧಿತರೆಲ್ಲರೂ ಕೇರಳ ಮೂಲದ ವಿದ್ಯಾರ್ಥಿಗಳಾಗಿದ್ದು. ವಳಚ್ಚೀಲ್ ನಲ್ಲಿರುವ ಶ್ರೀನಿವಾಸ ಕಾಲೇಜಿನ ಎರಡನೇ ವರ್ಷದ ವಿದ್ಯಾರ್ಥಿಗಳೆಂದು ಗೊತ್ತಾಗಿದೆ.
ಬಂಧಿತರನ್ನು ಅಶ್ವಥ್ (20 ), ಜಿಷ್ಣು ( 22 ), ಶ್ರೀಕಾಂತ್ ( 20 ), ರಾಹುಲ್ ( 201), ಅಭಿರತ್ ರಾಜೀವ್ ( 21 ) ಮುಕ್ತಾರ್ ಆಲಿ ( 19 ), ಸಾಯಿನಾಥ್ ( 22 ) ಹಾಗೂ ಮಹಮ್ಮದ್ ರಝೀನ್ ಎಂದು ಗುರುತಿಸಲಾಗಿದೆ.
ಮೊದಲ ವರ್ಷದ ಬಿ ಫಾರ್ಮಾ ವಿದ್ಯಾರ್ಥಿಯೊಬ್ಬನಿಗೆ ಮೀಸೆ ಹಾಗೂ ತಲೆ ಬೋಳಿಸಿಕೊಂಡು ಬರುವಂತೆ ಈ ಖದೀಮರು ಒತ್ತಾಯಿಸಿದ್ದರು. ಅವರ ಒತ್ತಡಕ್ಕೆ ಮಣಿಯದೇ ಇದ್ದ ಕಾರಣಕ್ಕೆ 6 ದಿನಗಳ ಕಾಲ ಆ ವಿದ್ಯಾರ್ಥಿಯನ್ನು ಗೋಳಾಡಿಸಿದ್ದರು.
ಬಳಿಕ ಈ ಸಂಬಂಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Discussion about this post