ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅರನ್ನು ಅವಹೇಳನಕಾರಿಯಾಗಿ ಹಾಗೂ ರೈತರ ಪ್ರತಿಭಟನೆ ಬಗ್ಗೆ ಪ್ರಚೋದನಕಾರಿ ಟ್ವೀಟ್ ಮಾಡಿದ್ದ ಸುಮಾರು 250 ಟ್ವೀಟ್ ಖಾತೆಗಳಿಗೆ ಇದೀಗ ಮರು ಜೀವ ಬಂದಿದೆ.
ಸೋಮವಾರ ಈ ಖಾತೆಗಳಿಂದ ಅವಹೇಳನಕಾರಿ ಟ್ವೀಟ್ ಗಳು ಬಂದ ಹಿನ್ನಲೆಯಲ್ಲಿ ಈ ಖಾತೆಗಳನ್ನು ಟ್ವೀಟರ್ ಸಂಸ್ಥೆ ತಡೆ ಹಿಡಿದಿತ್ತು.
ರಾತ್ರಿ ಹೊತ್ತಿಗೆ ತಡೆ ಹಿಡಿಯಲ್ಪಟ್ಟಿದ್ದ ಎಲ್ಲಾ ಖಾತೆಗಳನ್ನು ಮರು ಸ್ಥಾಪಿಸಲಾಗಿದೆ.

ಕೇಂದ್ರದ ಕೃಷಿ ಕಾಯ್ದೆಯ ವಿರುದ್ಧ ಹೋರಾಟ ನಡೆಸುತ್ತಿರುವ ಕಿಸಾನ್ ಏಕ್ರಾ ಮೋರ್ಚಾ ಹಾಗೂ ಬಿಕೆಯು ಏಕ್ರಾ ಉರ್ಗಾನ್ ನ ಟ್ವೀಟರ್ ಖಾತೆಗಳು ಇದಾಗಿವೆ ಎಂದು ಗೊತ್ತಾಗಿದೆ.

ಪ್ರಚೋದನಕಾರಿ, ಸುಳ್ಳು ಹಾಗೂ ಅವಹೇಳನಕಾರಿ ಟ್ವೀಟ್ ಮಾಡೋ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಗೃಹ ಇಲಾಖೆ ಟ್ವೀಟರ್ ಸಂಸ್ಥೆಗೆ ಮನವಿ ಮಾಡಿತ್ತು.
Discussion about this post