ಬೆಂಗಳೂರು : ಸೆಲೆಬ್ರೆಟಿ ಬದುಕು ಅನ್ನೋದು ಒಂದು ರೀತಿಯಲ್ಲಿ ಯಾರಿಗೂ ಬೇಡದ ಪಾಡು. ಅಭಿಮಾನಿಗಳ ಹುಚ್ಚುತನ ಮೀತಿ ಮೀರಿದರೂ ಸೈಲೆಂಟ್ ಆಗಿರಬೇಕಾದ ಪರಿಸ್ಥಿತಿ.
ಚಂದನವನದ ನಟಿ ಶಾನ್ವಿ ಶ್ರೀವಾಸ್ತವ್ ಗೂ ಹಾಗೆ ಆಗಿದೆ. ಸಾಮಾಜಿಕ ತಾಣದಲ್ಲಿ ಅಭಿಮಾನಿಗಳೊಂದಿಗೆ ಸಂವಹನ ನಡೆಸಲು ಹೋಗಿ ಮುಜುಗರಕ್ಕೆ ಸಿಲುಕಿದ್ದಾರೆ.

ಮುಜುಗರದ ಪರಿಸ್ಥಿತಿ ಎದುರಾದರೂ ಅದನ್ನು ತೋರ್ಪಡಿಸದೆ, ಬುದ್ದಿವಂತಿಕೆ ತೋರಿ ಚಾಣಾಕ್ಷ್ಯತನದಿಂದ ಪಾರಾಗಿದ್ದಾರೆ.
ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಿದ್ದ ಸಂದರ್ಭದಲ್ಲಿ ಅಭಿಮಾನಿಯೊಬ್ಬ Are You Virgin ಅನ್ನುವ ಪ್ರಶ್ನೆ ಕೇಳಿದ್ದಾನೆ. ಬೇರೆ ನಟಿಯರಾಗಿದ್ರೆ ಪಿತ್ತ ನೆತ್ತಿಗೇರುತ್ತಿತ್ತು.

ಆದರೆ ಈ ವೇಳೆ ಮುಜುಗರದ ಪ್ರಶ್ನೆ ಎದುರಾದರೂ, ಕಸಿವಿಸಿಯಾದರೂ ಅಭಿಮಾನಿಯನ್ನು ನಿರಾಶೆಗೊಳಿಸಲಿಲ್ಲ. ಬೇರೆ ಯಾರಾದರೂ ಆ… ಮುಂದಕ್ಕೆ ಹೋಗೋಣ ಅಂದಿರೋರು. ಆದರೆ ಶಾನ್ವಿ Are You Virgin ಪ್ರಶ್ನೆಯನ್ನೂ ಕೂಡಾ ತಮಾಷೆಯಾಗಿಯೇ ಸ್ವೀಕರಿಸಿ, ಚಪ್ಪಾಳೆ ತಟ್ಟಿ…ಏನೂ ಪ್ರಶ್ನೆ ಕೇಳ್ತಿರಾ ಅನ್ನೋ ರೀತಿ ಸನ್ನೆ ಮಾಡಿದ್ದಾರೆ.
ಪಾಪ ಪ್ರಶ್ನೆ ಕೇಳಿದ ಅಭಿಮಾನಿಗೆ ಅದೇನೂ ಅರ್ಥವಾಯ್ತೋ ಗೊತ್ತಿಲ್ಲ.

ಏನೇ ಇರಲಿ ಯಾವುದೇ ವ್ಯಕ್ತಿಗಳ ಖಾಸಗಿ ಬದುಕಿಗೆ ಕೈ ಹಾಕೋ ಅಧಿಕಾರ ಇಲ್ಲ ಅನ್ನೋದನ್ನು ಸೆಲೆಬ್ರೆಟಿಗಳ ಅಭಿಮಾನಿಗಳು ಮೊದಲು ಅರ್ಥಮಾಡಿಕೊಳ್ಳಬೇಕು.
Discussion about this post