ನವದೆಹಲಿ : ಕೊರೋನಾ ಅನ್ನುವ ಚೈನಾ ವೈರಸ್ ಸೃಷ್ಟಿಸಿದ ಆವಾಂತರ ಒಂದಲ್ಲ ಎರಡಲ್ಲ. ಪಾಪಿ ಚೀನಾ ಸರಿಯಾಗಿರುತ್ತಿದ್ರೆ ಇವತ್ತು ಇಡೀ ವಿಶ್ವ ಈ ಸ್ಥಿತಿಗೆ ತಲುಪುತ್ತಿರಲಿಲ್ಲ.
ಈ ನಡುವೆ ಕೊರೋನಾ ಸೋಂಕು ಪತ್ತೆಗೆ RT-PCR ಹಾಗೂ Antigen ಪರೀಕ್ಷೆ ನಡೆಸುವುದು ಅನಿವಾರ್ಯ. ಆದರೆ ಅದರ ವರದಿ ಬರಲು ಏನಿಲ್ಲ ಅರ್ಧ ಗಂಟೆಯಿಂದ 24 ಗಂಟೆಯವರೆಗೆ ಕಾಯಬೇಕು.
ಆದರೆ ಇದೀಗ ಭಾರತೀಯ ಸೇನಾ ಪಡೆ ಕೆಲವೇ ಸೆಕೆಂಡುಗಳಲ್ಲಿ ಕೊರೋನಾ ಸೋಂಕು ಪತ್ತೆ ಹಚ್ಚಲು ಮುಂದಾಗಿದೆ. ಅದು ಕೂಡಾ ನಾಯಿಗಳ ಮೂಲಕ.

ವಿದೇಶಗಳಲ್ಲಿ ಹೀಗೆ ನಾಯಿಗಳ ಮೂಲಕ ಕೊರೋನಾ ಸೋಂಕು ಪತ್ತೆ ಹಚ್ಚೋ ಕ್ರಮ ಈಗಾಗಲೇ ಜಾರಿಯಲ್ಲಿದೆ. ಭಾರತದಲ್ಲಿ ಮೊದಲ ಬಾರಿಗೆ ಈ ಸಾಹಸ ಕೈಗೊಳ್ಳಲಾಗಿದೆ.
ಈ ಸಲುವಾಗಿ 2 ವರ್ಷದ ಕ್ಯಾಸ್ಟರ್ ಮತ್ತು 1 ವರ್ಷದ ಜಯಾ ಅನ್ನೋ ಚಿಪ್ಪಿಪಾರೈ ತಳಿಯ ತಮಿಳುನಾಡು ಮೂಲದ ನಾಯಿಗಳಿಗೆ ತರಬೇತಿ ನೀಡಲಾಗಿದೆ.
ಹೀಗೆ ಸೋಂಕು ಪತ್ತೆ ಹಚ್ಚುವ ತರಬೇತಿ ನೀಡಲು 36 ವಾರ ಬೇಕಾಗುತ್ತದೆ. ಆದರೆ ಈ ಎರಡು ನಾಯಿಗಳಿಗೆ 16 ವಾರಗಳಲ್ಲೇ ತರಬೇತಿ ನೀಡಿ ಸಿದ್ದಗೊಳಿಸಲಾಗಿದೆ.
ಪತ್ತೆ ಹೀಗೆ…!
ಕೊರೋನಾ ವೈರಸ್ ದೇಹದಲ್ಲಿ ಜೀವಕೋಶಗಳ ಮೇಲೆ ದಾಳಿ ನಡೆಸುತ್ತದೆ. ಇದರಿಂದಾಗಿ ದೇಹದಲ್ಲಿ ಒಂದಿಷ್ಟು ರಾಸಾಯನಿಕ ಬಿಡುಗಡೆಯಾಗುತ್ತದೆ. ಇವು ಬೆವರು ಮತ್ತು ಮೂತ್ರದ ಮೂಲಕ ಹೊರಗೆ ಬರುತ್ತದೆ.
ಇವುಗಳ ಮಾದರಿಯನ್ನು ನಾಯಿಗೆ ಪರಿಚಯಿಸಲಾಗಿದ್ದು, ಈ ರೀತಿಯ ವಾಸನೆ ಕಂಡು ಬಂದರೆ ಪತ್ತೆ ಹಚ್ಚುವಂತೆ ತರಬೇತಿ ನೀಡಲಾಗಿದೆ.
ಬಳಿಕ ಯೋಧರ ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ನಾಯಿಗಳನ್ನು ಮೂಸಲು ಬಿಡಲಾಗುತ್ತದೆ. ಒಂದು ವೇಳೆ ಕೊರೋನಾ ವಾಸನೆಯ ಸುಳಿವು ಸಿಕ್ಕರೆ ನಾಯಿಗಳು ಆ ಮಾದರಿ ಬಳಿ ಹೋಗಿ ಕೂರುತ್ತದೆ.
ಪ್ರಸ್ತುತ ಈ ಸೇವೆ ಸೈನಿಕರಿಗೆ ಮಾತ್ರ ಲಭ್ಯ.
Discussion about this post