ಚೆನೈ : ಕೊರೋನಾ ಆತಂಕದ ಬಳಿಕ ನಡೆಯುತ್ತಿರುವ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ನಾಳೆ ಚೆಪಾಕ್ ಕ್ರೀಡಾಂಗಣ ಸಾಕ್ಷಿಯಾಗಲಿದೆ.
ಆಟಗಾರರು ಮೊದಲ ಬಾರಿಗೆ ಪ್ರೇಕ್ಷಕರ ಸಮ್ಮುಖದಲ್ಲಿ ಆಡಲಿದ್ದು, ಸಿಳ್ಳೆ, ಕೇಕೆಗಳನ್ನು ಆಟಗಾರರು ಆಸ್ವಾದಿಸಲಿದ್ದಾರೆ.
ಇದನ್ನೂ ಓದಿ : ಭಾರತ ಇಂಗ್ಲೆಂಡ್ 2ನೇ ಟೆಸ್ಟ್ : ಕೇವಲ 10 ಸಾವಿರ ಮಂದಿಯ ನಡುವೆ ನಡೆಯಲಿದೆ ಆಟ
ಈ ನಡುವೆ ಕೊರೋನಾ ಸೋಂಕಿನ ಆತಂಕ ಇನ್ನೂ ಇರುವ ಹಿನ್ನಲೆಯಲ್ಲಿ ಹಲವಾರು ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಬಿಸಿಸಿಐ ಸೂಚಿಸಿದೆ.
ಈ ಹಿನ್ನಲೆಯಲ್ಲಿ ಕ್ರೀಡಾಂಗಣ ಪ್ರವೇಶಿಸುವ ಪ್ರತಿಯೊಬ್ಬರ ದೇಹದ ಉಷ್ಣತೆಯನ್ನು ಪರಿಶೀಲನೆ ನಡೆಸಲಾಗುತ್ತದೆ.
ಚೆಂಡು ಸಿಕ್ಸರ್ ಗೆ ಹೋದ್ರೆ ಪ್ರತಿ ಸಲ ಚೆಂಡನ್ನು ಸ್ಯಾನಿಟೈಸ್ ಮಾಡುವುದು ಕಡ್ಡಾಯ. ಚೆಂಡು ಸ್ಯಾನಿಟೈಸ್ ಮಾಡುವ ಜವಾಬ್ದಾರಿ ಅಂಪೈರ್ ಅವರದ್ದಾಗಿದೆ.
ಮಾತ್ರವಲ್ಲದೆ ಪ್ರೇಕ್ಷಕರಿಂದ ಚೆಂಡು ಪಡೆಯುವ ಆಟಗಾರ ಕೂಡಾ ತನ್ನ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಳ್ಳಬೇಕು.
ಇದು ಚೆಂಡಿನ ಕಥೆಯಾದರೆ,ಕ್ರೀಡಾಂಗಣದಲ್ಲಿ ಯಾರೂ ಕೆಮ್ಮುವ ಹಾಗಿಲ್ಲ, ಸೀನುವ ಹಾಗಿಲ್ಲ. ಇದಕ್ಕಾಗಿ ಪ್ರೇಕ್ಷಕರ ಮೇಲೆ ನಿಗಾ ವಹಿಸಲು ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.
ಯಾರಾದರೂ ಕೆಮ್ಮಿದರೆ ಸೀನಿದರೆ ಅವರನ್ನು ತಕ್ಷಣ ಐಸೋಲೇಷನ್ ಕೊಠಡಿಗೆ ಇದೇ ತಂಡ ಕರೆದೊಯ್ಯಲಿದೆ.
Discussion about this post