ನವದೆಹಲಿ : ಹೊಸ ಗೌಪ್ಯತಾ ನೀತಿಯ ವಿರುದ್ಧ ವಾಟ್ಸಾಪ್ ಸಂಸ್ಥೆ ವಿರುದ್ಧ ಕಿಡಿ ಕಾರಿರುವ ಸುಪ್ರೀಂಕೋರ್ಟ್ ಫೇಸ್ ಬುಕ್ ಮತ್ತು ವಾಟ್ಸಾಪ್ ಕಂಪನಿಗಳಿಗೆ ನೊಟೀಸ್ ಜಾರಿ ಮಾಡಿದೆ.
ಕೆಲ ದಿನಗಳ ಹಿಂದಷ್ಟೇ ವಾಟ್ಸಾಪ್ ತನ್ನ ಗೌಪ್ಯತಾ ನೀತಿಗಳನ್ನು ಬದಲಾಯಿಸಿತ್ತು. ಈ ಬಗ್ಗೆ ವಿರೋಧಗಳು ವ್ಯಕ್ತವಾಗಿದ್ದರು ಸಂಸ್ಥೆ ಮಾತ್ರ ಕ್ಯಾರೇ ಅಂದಿರಲಿಲ್ಲ. ಹೀಗಾಗಿ ಅನೇಕ ಅರ್ಜಿಗಳು ಸುಪ್ರೀಂಕೋರ್ಟ್ ನಲ್ಲಿ ದಾಖಲಾಗಿತ್ತು.
ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಳ್ಳುತ್ತಲೇ ಸಂಸ್ಥೆಯ ನೂತನ ಗೌಪ್ಯತಾ ನೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತು.
ಚೀಫ್ ಜಸ್ಟಿಲ್ ಎಸ್ ಎ ಬೊಬ್ಡೆ, ನ್ಯಾ, ಎ.ಎಸ್. ಬೋಪಣ್ಣ ಹಾಗೂ ನ್ಯಾ. ಎ ರಾಮ ಸುಬ್ರಹ್ಮಣ್ಯಂ ಅವರ ಪೀಠ ನಿಮ್ದು 2 ರಿಂದ 3 ಟ್ರಿಲಿಯನ್ ಕಂಪನಿ ಇರಬಹುದು ಆದರೆ ಹೊಸ ಗೌಪ್ಯತಾ ನೀತಿಯಿಂದ ಖಾಸಗಿ ಮಾಹಿತಿ ಸೋರಿಕೆಯಾಗಬಹುದು ಅನ್ನುವ ಆತಂಕ ಜನರಲ್ಲಿದೆ. ಹೀಗಾಗಿ ನಿಮ್ಮ ಹಣಕ್ಕಿಂತ ಜನರ ಖಾಸಗಿ ಮಾಹಿತಿಗಳನ್ನು ರಕ್ಷಿಸುವ ಜವಾಬ್ದಾರಿ ನಮ್ಮದು ಅಂದಿದ್ದಾರೆ.
ಈ ವೇಳೆ ಭಾರತದಲ್ಲಿ ಮಾತ್ರ ಈ ಹೊಸ ನೀತಿ ಅನ್ವಯವಾಗಲಿದೆ ಅನ್ನುವುದು ಸುಳ್ಳು. ಯುರೋಪಿಯನ್ ದೇಶಗಳನ್ನು ಹೊರತು ಪಡಿಸಿ ಎಲ್ಲಾ ಕಡೆ ಇದು ಅನ್ವಯವಾಗಲಿದೆ ಅಂದಿದೆ.
ಯುರೋಪಿಯನ್ ದೇಶಗಳಲ್ಲಿ ಡೇಟಾ ಸುರಕ್ಷತೆಗೆ ಸಂಬಂಧಿಸಿದಂತೆ ವಿಶೇಷ ಕಾನೂನು ಇರುವುದರಿಂದ ಅಲ್ಲಿಗೆ ಅನ್ವಯಿಸುವುದಿಲ್ಲ ಅಂದಿದೆ.
ಆದರೆ ಇದಕ್ಕೆ ಒಪ್ಪದ ಸುಪ್ರೀಂಕೋರ್ಟ್ ಎರಡೂ ಕಂಪನಿಗಳಿಗೆ ನೊಟೀಸ್ ಕೊಡಲಾಗಿದ್ದು ಹಾಗೂ ಈ ಸಂಬಂಧ ತನ್ನ ಪ್ರತಿಕ್ರಿಯೆ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದೆ.
Discussion about this post