ಕನ್ನಡದ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಇದೀಗ ಒಂದಿಷ್ಟು ಬಣ್ಣ ತುಂಬಿಕೊಳ್ಳುತ್ತಿದೆ.
ವೀಕ್ಷಕರನ್ನು ಸೆಳೆಯುವ ಸಲುವಾಗಿ ಸ್ಪರ್ಧಿಗಳು ಸರ್ಕಸ್ ಪ್ರಾರಂಭಿಸಿದ್ದಾರೆ. ಮತ್ತೆ ಕೆಲವರು ತಮ್ಮದೇ ನೇಮ್ ಫೇಮ್ ಗಳ ಅಮಲಿನಲ್ಲಿದ್ದಾರೆ.
ಈ ನಡುವೆ ನಿರ್ಮಲಾ ಅವರು ವೀಕ್ಷಕರನ್ನು ಸೆಳೆಯುವ ಸಲುವಾಗಿ ತಮ್ಮದೇ ಆಟ ಶುರುವಿಟ್ಟುಕೊಂಡಿದ್ದಾರೆ.
ರಾತ್ರಿ ಹೊತ್ತು ಸೀರೆ ಉಟ್ಟುಕೊಳ್ಳುವುದು, ಮೇಕಪ್ ಮಾಡಿಕೊಳ್ಳುವುದು, ಒಬ್ಬರೇ ಒಂಟಿಯಾಗಿ ಮಾತನಾಡುವುದಕ್ಕೆ ಪ್ರಾರಂಭಿಸಿದ್ದಾರೆ.

ಇವೆಲ್ಲಾ ಅವರ ಆಟದ ಸ್ಟ್ಯಾಟರ್ಜಿ ಅನ್ನುವುದು ಪಕ್ಕಾ, ಆದರೆ ಇವರ ವರ್ತನೆ ಮನೆಯ ಕೆಲಸ ಸದಸ್ಯರಿಗೆ ಗಾಬರಿ ಹುಟ್ಟಿಸಿರುವುದು ಸತ್ಯ.
ವೀಕ್ಷಕರನ್ನು ಸೆಳೆಯುವ ಸಲುವಾಗಿಯೇ ಹೀಗೆಲ್ಲಾ ಆಟ ಆಡುತ್ತಿದ್ದಾರೆ ಎಂದು ಮನೆಯ ಹಿರಿಯ ಸದಸ್ಯರೊಬ್ಬರು ಹೇಳಿದ್ದಾರೆ ಕೂಡಾ, ಆದರೆ ಅದನ್ನು ಅದೆಷ್ಟು ಸದಸ್ಯರು ಕಿವಿ ಹಾಕಿಕೊಂಡಿದ್ದಾರೋ ಗೊತ್ತಿಲ್ಲ.
ಒಂದು ವೇಳೆ ಕಿವಿಗೆ ಹಾಕಿಕೊಂಡಿದ್ರೆ ಪ್ರತಿಯೊಬ್ಬ ಸದಸ್ಯನೂ ನಾಳೆಯಿಂದ ವಿಚಿತ್ರವಾಗಿ ಆಡಲು ಶುರು ಮಾಡಿದ್ರೆ ಅಚ್ಚರಿ ಇಲ್ಲ.
ಅಂದ ಹಾಗೇ ನಿರ್ಮಲಾ ಅವರು ಹೀಗೆ ಆಡುವುದಕ್ಕೂ ಕಾರಣವಿದೆ. ನಾಳೆ ಸುದೀಪ್ ಬರೋ ದಿನ, ಅವರ ಕಣ್ಣಿಗೆ ಬಿದ್ದು, ಅವರು ಒಂದಿಷ್ಟು ಪ್ರಶ್ನೆ ಕೇಳಿದರೆ ಮಾತ್ರ ಮುಂದಿನ ವಾರ ಮನೆಯಲ್ಲಿ ಉಳಿಯಬಹುದು.
ಹೇಳಿ ಕೇಳಿ ನಿರ್ಮಲಾ ಅವರು ರಿಯಾಲಿಟಿ ಶೋಗಳನ್ನು ಅರೆದು ಕುಡಿದವರು.
Discussion about this post