ಬೆಂಗಳೂರು : ಕರುನಾಡನ್ನು ಬೆಚ್ಚಿ ಬೀಳಿಸಿದ ಡ್ರಗ್ಸ್ ಪ್ರಕರಣದ ತನಿಖೆ ಇದೀಗ ಅಂತಿಮ ಘಟ್ಟ ತಲುಪಿದೆ. ಆದರೆ ಯಾವುದೇ ತಾರ್ಕಿಕ ಅಂತ್ಯಕ್ಕೆ ತನಿಖೆ ಬಂದಿಲ್ಲ ಅನ್ನುವುದನ್ನು ಕೂಡಾ ಮರೆಯುವಂತಿಲ್ಲ.
ಚಂದನವನದ ಡ್ರಗ್ಸ್ ಪ್ರಕರಣ ಸಂಬಂಧ ಇದೀಗ ಸಿಸಿಬಿ ಅಧಿಕಾರಿಗಳು ನ್ಯಾಯಾಲಯಕ್ಕೆ ಜಾರ್ಜ್ ಶೀಟ್ ಸಲ್ಲಿಸಿದ್ದಾರೆ.

2900 ಪುಟಗಳ ಜಾರ್ಜ್ ಶೀಟ್ ನಲ್ಲಿ 25 ಆರೋಪಿಗಳನ್ನು ಗುರುತಿಸಲಾಗಿದೆ. ಜೊತೆಗೆ 180 ಸಾಕ್ಷಿಗಳ ಹೇಳಿಕೆಯನ್ನು ದಾಖಲಿಸಿರುವ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳ ಹೆಸರನ್ನೂ ಉಲ್ಲೇಖಿಸಲಾಗಿದೆ.

ನಟಿ ರಾಗಿಣಿ ಎಲ್ಲಿ ಪಾರ್ಟಿ ಮಾಡಿದರು, ಯಾರು ಪಾರ್ಟಿಯನ್ನು ಆಯೋಜಿಸಿದ್ದರು, ಡ್ರಗ್ಸ್ ಹೇಗೆ ಯಾರ ಮೂಲಕ ತರಿಸಿಕೊಂಡಿದ್ದರು ಅನ್ನುವುದನ್ನು ಜಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ.

ಕೇವಲ ರಾಗಿಣಿ ಮಾತ್ರವಲ್ಲದೆ ನಟಿ ಸಂಜನಾಳ ಮೇಲೂ ಕೂಡಾ ಗಂಭೀರ ಆರೋಪಗಳನ್ನು ಸಾಕ್ಷಿ ಸಮೇತ ಸಿಸಿಬಿ ಅಧಿಕಾರಿಗಳು ಹೊರಿಸಿದ್ದಾರೆ.
Discussion about this post