ನವದೆಹಲಿ : ತಾಳಿ ಕಟ್ಟಿದ ಗಂಡ ಪರ ಮಹಿಳೆಯೊಂದಿಗೆ ಮಾರುಕಟ್ಟೆಯಲ್ಲಿ ಸುತ್ತಾಡುತ್ತಿರುವುದನ್ನು ಗಮನಿಸಿದ ಪತ್ನಿಯೊಬ್ಬಳು ಗಂಡನೊಂದಿಗೆ ಕಿತ್ತಾಡಿಕೊಂಡ ಘಟನೆ ಉತ್ತರ ಪ್ರದೇಶದ ಮೀರತ್ ನಲ್ಲಿ ನಡೆದಿದೆ.
ಮೀರತ್ ಸೆಂಟ್ರಲ್ ಮಾರುಕಟ್ಟೆಯಲ್ಲಿ ಈ ಘಟನೆ ನಡೆದಿದ್ದು, ಪತಿ ಅದ್ನಾನ್ ಪತ್ನಿಯಿಂದ ಸೇವೆ ಮಾಡಿಸಿಕೊಂಡವನು ಎಂದು ಗುರುತಿಸಲಾಗಿದೆ.
ಅದ್ನಾನ್ ಹಾಗೂ ಆಯೇಷಾ 2020 ಫೆಬ್ರವರಿಯಲ್ಲಿ ಮದುವೆಯಾಗಿದ್ದರು. ಆದರೆ ಜಾತಕದಲ್ಲಿ ಅದೇನೂ ಸಮಸ್ಯೆಯಿತ್ತೋ ಗೊತ್ತಿಲ್ಲ ಇಬ್ಬರ ನಡುವೆ ಹೊಂದಾಣಿಕೆ ಇರಲಿಲ್ಲ.
ಇದೇ ಕಾರಣದಿಂದ ಅದ್ನಾನ್ ಆಯೇಷಾಳನ್ನು ತವರು ಮನೆಯಲ್ಲಿ ಬಿಟ್ಟಿದ್ದ. ಈ ನಡುವೆ ಅದ್ನಾನ್ ಅಯೇಷಾಳಿಗೆ ಡಿವೋರ್ಸ್ ಕೊಡಲು ನಿರ್ಧರಿಸಿದ್ದ.
ಈ ನಡುವೆ ಕೆಲ ದಿನಗಳ ಹಿಂದೆ ಮೀರತ್ ಸೆಂಟ್ರಲ್ ಮಾರುಕಟ್ಟೆಗೆ ಹೋಗಿದ್ದ ಆಯೇಷಾಳಿಗೆ ಗಂಡ ಪರ ಸ್ತ್ರೀ ಜೊತೆ ಶಾಪಿಂಗ್ ಮಾಡುತ್ತಿರುವುದು ಕಾಣಿಸಿದೆ.
ಈ ವೇಳೆ ಶೋರೂಮ್ ಬಳಿ ಹೋದ ಆಯೇಷಾ ಹೊರಗ ಬರುವಂತೆ ಗಂಡನಿಗೆ ತಾಕೀತು ಮಾಡಿದ್ದಾಳೆ. ಅಷ್ಟೇ ಇಬ್ಬರ ನಡುವೆ ಜಗಳ ಪ್ರಾರಂಭವಾಗಿದೆ.
ಇನ್ನು ನಮ್ಮ ಜನ ಕೇಳಬೇಕಾ, ಜಗಳ ಬಿಡಿಸುವ ಬದಲು ಮೊಬೈಲ್ ಕೈಗೆತ್ತಿಕೊಂಡು ನೇರ ಪ್ರಸಾರ ಪ್ರಾರಂಭಿಸಿದ್ದಾರೆ.
ಈ ವೇಳೆ ನಾನು ನಿನಗೆ ಡಿವೋರ್ಸ್ ಕೊಡುತ್ತಿದ್ದೇನೆ, ನನ್ನ ಬಗ್ಗೆ ನೀನು ಪ್ರಶ್ನಿಸುವಂತಿಲ್ಲ ಎಂದು ಅದ್ನಾನ್ ದಬಾಯಿಸಿದ್ದಾನೆ. ಈ ವೇಳೆ ಡಿವೋರ್ಸ್ ಬಗ್ಗೆ ನನಗೆ ಗೊತ್ತೇ ಇಲ್ಲ, ಸಾಕ್ಷಿ ತೋರಿಸು ಅಂದಿದ್ದಾಳೆ.
ಈ ವೇಳೆ ಮಧ್ಯ ಪ್ರವೇಶಿಸಿದ ಅದ್ಯಾರೋ ಪುಣ್ಯಾತ್ಮರು ಇಬ್ಬರನ್ನೂ ಸ್ಥಳೀಯ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಇದೀಗ ಇಬ್ಬರ ಕಡೆಯಿಂದ ದೂರು ಸ್ವೀಕರಿಸಿರುವ ಪೊಲೀಸರು, ಇಬ್ಬರನ್ನೂ ಸಮಾಧಾನ ಮಾಡಿ ಕಳುಹಿಸಿದ್ದಾರೆ.
ಜೊತೆಗೆ ಇಬ್ಬರ ನಡುವೆ ಡಿವೋರ್ಸ್ ಪ್ರಕ್ರಿಯೆ ಜಾರಿಯಲ್ಲಿದ್ದು, ನ್ಯಾಯಾಲಯದಲ್ಲೇ ತೀರ್ಮಾನವಾಗಬೇಕು ಅಂದಿದ್ದಾರೆ.
Discussion about this post