ಬಿಗ್ ಬಾಸ್ ಮನೆಯ ಬಾರ್ಬಿ ಡಾಲ್ ಎಂದೇ ಹೆಸರಾಗಿದ್ದ ನಿವೇದಿತಾ ಗೌಡ, ಸಾಮಾಜಿಕ ಜಾಲತಾಣದಲ್ಲಿ ಪ್ರತೀ ಸಲ ಸದ್ದು ಮಾಡುತ್ತಾರೆ.
ಇದೇ ಕಾರಣಕ್ಕಾಗಿ ಮೈಸೂರು ದಸರಾದಲ್ಲೂ ಚಂದನ್ ಮತ್ತು ನಿವೇದಿತಾ ಸದ್ದು ಮಾಡಿದ್ದರು.
ಹಾಗೇ ನೋಡಿದರೆ ನಿವೇದಿತಾ ಚಂದನ್ ಕೈ ಹಿಡಿದ ಮೇಲೆ ಸ್ವಲ್ಪ ಜಾಸ್ತಿಯೇ ಸದ್ದು ಮಾಡುತ್ತಿದ್ದಾರೆ.
ಫೆಬ್ರವರಿ 25 ರಂದು ವಿವಾಹವಾಗಿದ್ದ ಚಂದನ್ ನಿವೇದಿತಾ ಮಾರ್ಚ್ 1 ರಂದು ಹನಿಮೂನ್ ಗೆ ತೆರಳಿದ್ದರು.
ವಿದೇಶಕ್ಕೆ ಹೋದವರು ಕೊರೋನಾ ಕಾರಣದಿಂದ ಹನಿಮೂನ್ ಟ್ರಿಪ್ ಅನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ಹಿಂತಿರುಗಿದ್ದರು.
ಈ ವೇಳೆ ದಂಪತಿ ಸಿಕ್ಕಾಪಟ್ಟೆ ವಿವಾದಕ್ಕೆ ಗುರಿಯಾಗಿದ್ದರು.
ಇದೀಗ ನಿವೇದಿತಾ ಗೌಡ ಹಿಂದಿಯ ಹಾಡೊಂದಕ್ಕೆ ಗೆಳತಿಯೊಂದಿಗೆ ಹೆಜ್ಜೆ ಹಾಕಿದ್ದು, ಮದುವೆ ಮುಂಚಿನ ಖದರ್ ನಲ್ಲಿ ಕಾಣಿಸಿಕೊಂಡಿದ್ದಾರೆ.
ಗೃಹಿಣಿಯಾದ ಬಳಿಕ ನಿವೇದಿತಾ ಹೀಗೆಲ್ಲಾ ಡ್ಯಾನ್ಸ್ ಮಾಡಿರಲಿಲ್ಲ. ಹಾಗಾದ್ರೆ ಹೇಗಿದೆ ಆ ಡ್ಯಾನ್ಸ್ ಇಲ್ಲಿದೆ ನೋಡಿ ಲಿಂಕ್.
Discussion about this post