ಲೇಖಕ, ಪತ್ರಕರ್ತ ಚಕ್ರವರ್ತಿ ಚಂದ್ರಚೂಡ ಅವರ ವೈಯುಕ್ತಿಕ ಜೀವನದ ನೋವಿನ ಕಥೆಗಳು ಬಹುತೇಕರಿಗೆ ಗೊತ್ತಿದೆ. ಮೊದಲ ಪತ್ನಿ ಇದ್ದಾಗಲೇ, ನಟಿ ಶೃತಿಗೆ ತಾಳಿ ಕಟ್ಟಿದ್ದ ಚಂದ್ರಚೂಡ ಬಳಿಕ ಅವರನ್ನೂ ಬಿಟ್ಟಿದ್ದರು.
ಈ ನಡುವೆ ಮದುವೆ ಪ್ರಕರಣ ಕೋರ್ಟ್ ಮೆಟ್ಟಿಲೇರಿದ್ದು ಇದೀಗ ಇತಿಹಾಸ. ಇದೇ ಕಾರಣದಿಂದ ಮೊದಲ ಪತ್ನಿ ಹಾಗೂ ಶೃತಿಯವರಿಂದ ದೂರವಾಗಿದ್ದ ಚಂದ್ರಚೂಡ ಹೆಸರು ಬೇರೆಯವರೊಂದಿಗೆ ಕೇಳಿ ಬಂದಿತ್ತು. ಅದೇನೇ ಇರಲಿ, ಬಿಗ್ ಬಾಸ್ ಮನೆಗೆ ಹೋದ ವೇಳೆ ಚಂದ್ರಚೂಡ ಅವರ ಮತ್ತೊಂದು ಮುಖದ ಪರಿಚಯ ಹಲವು ಸಲ ವೀಕ್ಷಕರಿಗೆ ಆಗಿದೆ.

ಸುದ್ದಿವಾಹಿನಿಗಳಲ್ಲಿ ಕೂತು ಮಾತನಾಡುವ ಚಂದ್ರಚೂಡ ಅವರಿಗೂ ಬಿಗ್ ಬಾಸ್ ಮನೆಯ ಚಂದ್ರಚೂಡ ಅವರಿಗೂ ಸಂಬಂಧವೇ ಇಲ್ಲ ಅನ್ನುವುದು ಸ್ಪಷ್ಟವಾಗಿದೆ ವ್ಯಕಿತ್ವ ಮತ್ತು ವ್ಯಕ್ತಿಗೆ ಸಂಬಂಧ ಇಲ್ಲ ಅನ್ನುವುದು ಅನಾವರಣಗೊಂಡಿದೆ.
ಈ ನಡುವೆ ಚಂದ್ರಚೂಡ ಅವರಿಗೆ ಮೂರನೇ ಮದುವೆಯಾಗುವ ಮನಸ್ಸಾಗಿದೆ. ಬಿಗ್ ಬಾಸ್ ಮನೆಯಿಂದ ಹೊರ ಹೋದ ಮೇಲೆ ಅವರು ಮಾಡುವ ಮೊದಲ ಕೆಲಸ ಹುಡುಗಿ ಹುಡುಕುವುದು. ಅರೇ ಏನು ಕಾಲ ಬಂತು ಸ್ವಾಮಿ ಎಂದು ಅಂದುಕೊಳ್ಳಬೇಡಿ.

ಚಂದ್ರಚೂಡ್ ಅವರೇ ಬಿಗ್ ಬಾಸ್ ಮನೆಯಲ್ಲಿ ಈ ಆಸೆಯನ್ನು ವ್ಯಕ್ತಪಡಿಸಿದ್ದು, ಪ್ರಶಾಂತ್ ಸಂಬರಗಿ ಬಳಿ ಸಂಗಾತಿಯೊಬ್ಬಳು ಬೇಕು ಅನ್ನುವ ಮನದ ಇಚ್ಛೆಯನ್ನು ಅರುಹಿದ್ದಾರೆ.
ಸಂಬರಗಿ ಅವರ ವ್ಯಕ್ತಿತ್ವ ಬಗ್ಗೆ ಮಾತನಾಡುವ ಸಂದರ್ಭದಲ್ಲಿ ಅವರ ಪತ್ನಿ ಸಂಗೀತಾ ಅವರ ಬಗ್ಗೆ ಭೇಷ್ ಅಂದಿದ್ದಾರೆ. ಸಂಗೀತಾ ಕಾರಣದಿಂದ ಸಂಬರಗಿ ಹೀಗಿದ್ದಾರೆ ಎಂದು ಹೊಗಳಿದ್ದಾರೆ. ಬಳಿಕ ನನಗೂ ಸ್ವಲ್ಪ ಬಟ್ಟೆ ಕಳುಹಿಸಿ ನನಗೆ ಯಾರೂ ಇಲ್ಲ ಎಂದು ಬಿಗ್ ಬಾಸ್ ಬಳಿ ಮನವಿ ಮಾಡಿಕೊಂಡಿದ್ದಾರೆ. ಬಳಿಕ ಮನೆಯಿಂದ ಹೊರ ಹೋದ ಹೋದ ತಕ್ಷಣ ಯಾರನ್ನಾದರೂ ಮಾಡಿಕೊಳ್ಳಬೇಕು.ಸಂಗಾತಿ ಹುಡುಕಬೇಕು ಅಂದಿದ್ದಾರೆ.

Discussion about this post