crossorigin="anonymous"> ಆಫ್ರಿಕಾ ಪ್ರಜೆಗಳಿಂದ ಆಕ್ಸಿಜನ್ ಹೆಸರಲ್ಲಿ ಮೋಸ : 2 ಕೋಟಿ ರೂ ಲೂಟಿ ಮಾಡಿದವರು ಅಂದರ್ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಆಫ್ರಿಕಾ ಪ್ರಜೆಗಳಿಂದ ಆಕ್ಸಿಜನ್ ಹೆಸರಲ್ಲಿ ಮೋಸ : 2 ಕೋಟಿ ರೂ ಲೂಟಿ ಮಾಡಿದವರು ಅಂದರ್

Radhakrishna Anegundi by Radhakrishna Anegundi
17-05-21, 4 : 01 pm
in ಕ್ರೈಮ್
oxygen cylinder
Share on FacebookShare on TwitterWhatsAppTelegram

ನವದೆಹಲಿ : ಕೊರೋನಾ ಸಂಕಷ್ಟ ಕಾಲದಲ್ಲೂ ಮೋಸ ಮಾಡಿದ ಮಂದಿಗೆ ಲೆಕ್ಕವಿಲ್ಲ. ಬೆಡ್, ರೆಮ್ಡಿಸೀವರ್, ಆಕ್ಸಿಜನ್ ಎಂದು ಆಸ್ಪತ್ರೆಗಳು ಸೇರಿದಂತೆ ಅನೇಕರು ದುಡ್ಡು ಸುಲಿಗೆ ಮಾಡಿದ್ದೆ ಮಾಡಿದ್ದು.

ಈ ನಡುವೆ ಭಾರತದ ಆಕ್ಸಿಜನ್ ಕೊರತೆಯ ಲಾಭವನ್ನು ಪಡೆದ ಆಫ್ರಿಕಾ ಪ್ರಜೆಗಳಿಬ್ಬರು ಸಿಲಿಂಡರ್ ಒದಗಿಸುವುದಾಗಿ ಹೇಳಿ 2 ಕೋಟಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವುದು ಬೆಳಕಿಗೆ ಬಂದಿದೆ.

ದೆಹಲಿಯ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿನಿಂದ ಬಳಲುತ್ತಿದ್ದ ತಮ್ಮ ಸಂಬಂಧಿಕರೊಬ್ಬರಿಗಾಗಿ ಆಕ್ಸಿಜನ್ ವ್ಯವಸ್ಥೆಯ ಹುಡುಕಾಟದಲ್ಲಿದ್ದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕ ನಂಬರ್ ಗೆ ಕರೆ ಮಾಡಿದರೆ, ಆರೋಪಿಗಳು 16 ಸಾವಿರ ರೂಪಾಯಿ ಪಾವತಿಸುವಂತೆ ಹೇಳಿದ್ದಾರೆ. ಜೊತೆಗೆ 4 ಸಾವಿರ ಸಾರಿಗೆ ಶುಲ್ಕ ನೀಡಲು ಸೂಚಿಸಿದ್ದರು. ಅದರಂತೆ 20 ಸಾವಿರ ಪಾವತಿಸದ ಬಳಿಕ ಮನೆ ಬಾಗಿಲಿಗೆ ಸಿಲಿಂಡರ್ ತಲುಪಲಿದೆ ಎಂದು ಭರವಸೆ ಬೇರೆ ಕೊಟ್ಟಿದ್ದರು. ಆದರೆ ಮನೆಗೆ ಬಾಗಿಲಿಗೆ ಅದ್ಯಾವ ಸಿಲಿಂಡರ್ ಬಂದಿರಲಿಲ್ಲ. ಹೀಗಾಗಿ ಮೋಸ ಹೋದವರು ಮೇ 5 ರಂದು ದೆಹಲಿಗೆ ಪೊಲೀಸರಿಗೆ ದೂರು ಸಲ್ಲಿಸಿದ್ದರು.

ಈ ದೂರಿನಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ಇಬ್ಬರು ಆಫ್ರಿಕನ್ ಪ್ರಜೆಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು  ನೈಜೀರಿಯಾದ ಚೀಮ ಬೆನ್ನೆತ್ (43) ಹಾಗೂ ಘಾನದ ಜೋನಥನ್ ಕೋಜೋ ( 44) ಎಂದು ಗುರುತಿಸಲಾಗಿದೆ.

ಬಂಧಿತರಿಂದ 163 ಸಿಮ್ ಕಾರ್ಡ್, 19 ಫೋನ್, 5 ಲ್ಯಾಪ್ ಟಾಪ್, ನಾಲ್ಕು ಡೆಬಿಟ್ ಕಾರ್ಡ್ ವಶಕ್ಕೆ ಪಡೆಯಲಾಗಿದೆ. ಬೆಂಗಳೂರಿನ ವ್ಯಕ್ತಿಯೊಬ್ಬ ಇವರಿಗೆ ಬ್ಯಾಂಕ್ ಖಾತೆಗಳನ್ನು ತೆರೆದುಕೊಡುತ್ತಿದ್ದ ಎಂದು ಗೊತ್ತಾಗಿದೆ. ಈ ರೀತಿಯ ವಂಚನೆ ಸಲುವಾಗಿಯೇ 20 ಬ್ಯಾಂಕ್ ಖಾತೆಗಳನ್ನು ಸೃಷ್ಟಿಸಿಕೊಂಡಿದ್ದ ಅವರು 2 ಕೋಟಿ ಗೂ ಹೆಚ್ಚು ಹಣವನ್ನು ದೇಶದ ವಿವಿಧ ಭಾಗಗಳಿಂದ ಆಕ್ಸಿಜನ್ ಒದಗಿಸುವುದಾಗಿ ಸುಳ್ಳು ಭರವಸೆ ನೀಡಿ ಸಂಗ್ರಹಿಸಿರುವುದು ಗೊತ್ತಾಗಿದೆ.

Tags: Coronaoxygen cylinder
Share1TweetSendShare

Discussion about this post

Related News

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ಅತ್ತ ದರ್ಶನ್ ಬಳ್ಳಾರಿ ಜೈಲು ಸೇರಿದ ಬೆನ್ನಲ್ಲೇ ಇತ್ತ ಎಸಿಪಿ ಚಂದನ್ ಮುಂದೆ ಹಾಜರಾದ ಚಿಕ್ಕಣ್ಣ

ಜೈಲಲ್ಲಿ ದರ್ಶನ್’ಗೆ ಆತಿಥ್ಯ : ತನಿಖೆಯ ಮೇಲುಸ್ತುವಾರಿ ವಹಿಸಿಕೊಂಡ ಆಯುಕ್ತ ಬಿ. ದಯಾನಂದ್

ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ : ಜೈಲಲ್ಲಿ ದರ್ಶನ್ ದರ್ಬಾರ್

ಅಪ್ಪನಿಂದ ಕಿರುಕುಳ ಮಗನಿಂದ ಅತ್ಯಾ*ಚಾರ | ರಿಪಬ್ಲಿಕ್ ಹಾಸನದ ಕಾಮಕಾಂಡ Karnataka sex tape scandal

ಐವರು ಮಂಗಳ ಮುಖಿಯರ ಅಟ್ಟಹಾಸ : ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತನೆ

ತಾಯಿ ಮಗನ ಅಪಹರಣ : 9 ಮಂದಿ ಕ್ರಿಮಿನಲ್ ಗಳ ಬಂಧನ

ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ರ ಜನತೆ : ಫ್ಲೈ ಓವರ್ ನಿಂದ ವ್ಹೀಲಿಂಗ್ ಕೋರರ ಬೈಕ್ ಎಸೆದ ನಾಗರಿಕರು

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್