ನಟಿ ರಚಿತಾ ರಾಮ್ ವಿವಾದಗಳಿಂದ ಸದಾ ದೂರವಿರುವವರು. ಅದ್ಯಾವ ಕಾರಣಕ್ಕೂ ಕೂಡಾ ವಿವಾದಗಳನ್ನು ಮೈ ಮೇಲೆ ಎಳೆದುಕೊಂಡವರಲ್ಲ. ಆದರೆ ಇತ್ತೀಚಿನ ವರ್ಷಗಳಲ್ಲಿ ರಚಿತಾ ರಾಮ್ ವಿವಾದಕ್ಕೆ ತುತ್ತಾಗುತ್ತಿದ್ದಾರೆ.
ಇದೀಗ ರಚಿತಾ ಒಪ್ಪಿಕೊಂಡಿರುವ ಲವ್ ಮಿ ಆರ್ ಹೇಟ್ ಮಿ ಚಿತ್ರದ ಟೈಟಲ್ ವಿವಾದಕ್ಕೆ ಕಾರಣವಾಗಿದೆ. ಚಿತ್ರ ಘೋಷಣೆಯಾದ ಬೆನ್ನಲ್ಲೇ ಲವ್ ಮಿ ಆರ್ ಹೇಟ್ ಮಿ ಟೈಟಲ್ ತಮ್ಮದೆಂದು ಸೈಕೋ ಚಿತ್ರದ ನಿರ್ದೇಶಕ ವಿ ದೇವದತ್ತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ಹತ್ತಿದ್ದಾರೆ.

ಶ್ರೀವೆಂಕಟೇಶ್ವರ ಟರ್ ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ಬಿಕೆ ರವಿಕಿರಣ್ ನಿರ್ಮಾಣದಲ್ಲಿ ನಾನು ಲವ್ ಮಿ ಆರ್ ಹೇಟ್ ಮಿ ಚಿತ್ರ ನಿರ್ದೇಶನ ಮಾಡುತ್ತಿದ್ದೇನೆ.
ಕೇವಲ ಟೈಟಲ್ ನೋಂದಣಿಯಾಗಿದ್ದರೆ ಈ ಶೀರ್ಘಿಕೆಯನ್ನು ನಾನು ಬಿಟ್ಟು ಕೊಡುತ್ತಿದ್ದೆ. ಆದರೆ ಫಸ್ಟ್ ಲುಕ್ ಹಾಗೂ ಪ್ರೋಮೋ ಶೂಟಿಂಗ್ ಆಗಿರುವ ಕಾರಣದಿಂದ ಟೈಟಲ್ ಬಿಟ್ಟು ಕೊಡೋ ಪ್ರಶ್ನೆಯೇ ಇಲ್ಲ ಅಂದಿದ್ದಾರೆ.

ದೀಪಕ್ ಗಂಗಾಧರ್ ನಿರ್ದೇಶನದಲ್ಲಿ ಲವ್ ಮಿ ಆರ್ ಹೇಟ್ ಮಿ ಚಿತ್ರದ ಹೆಸರು ಒಂದೆರೆಡು ದಿನದ ಹಿಂದೆ ಘೋಷಣೆಯಾಗಿತ್ತು.
Discussion about this post