ಭಾರತದ ಸ್ವದೇಶಿ ಲಸಿಕೆಯಾಗಿರುವ ಕೋವ್ಯಾಕ್ಸಿನ್ ಭಾರತ ಸೇರಿ 96 ರಾಷ್ಟ್ರಗಳಲ್ಲಿ ಲಸಿಕೆಯ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಸ್ವದೇಶಿ ಲಸಿಕೆ ಶೇ 81ರಷ್ಟು ಪರಿಣಾಮಕಾರಿ ಎಂದು ಕ್ಲಿನಿಕಲ್ ಟ್ರಯಲ್ ಗಳು ಹೇಳಿದೆ. ಅಷ್ಟೇ ಅಲ್ಲದೆ ಗಂಭೀರವಾದ ಒಂದೇ ಒಂದು ಅಡ್ಡ ಪರಿಣಾಮಗಳನ್ನು ಈ ಲಸಿಕೆ ಹೊಂದಿಲ್ಲ. ಹಲವು ರೂಪಾಂತರಿ ವೈರಸ್ ವಿರುದ್ಧ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದೆ. ಹಾಗಿದ್ದರೂ ಕೋವ್ಯಾಕ್ಸಿನ್ ಲಸಿಕೆಗೆ ವಿಶ್ವಸಂಸ್ಥೆಯಿಂದ ಅನುಮತಿ ಸಿಕ್ಕಿಲ್ಲ. ಚೀನಾದ ಲಸಿಕೆಗೆ ನಾಲ್ಕೇ ತಿಂಗಳಲ್ಲಿ ಅನುಮತಿ ಕೊಡುವ ಸೇಜ್ ಭಾರತದ ಲಸಿಕೆ ಕುರಿತಂತೆ ಹತ್ತು ಹಲವು ಪ್ರಶ್ನೆಗಳು ಕೇಳುತ್ತಿದೆ.
ಈ ವಿಳಂಭವನ್ನು ನೋಡಿದರೆ ತನ್ನ ತಾಳಕ್ಕೆ ತಕ್ಕಂತೆ ಕುಣಿಯುತ್ತಿರುವ ವಿಶ್ವಸಂಸ್ಥೆ ಮೂಲಕ ಭಾರತದ ಸ್ವದೇಶಿ ಲಸಿಕೆಗೆ ತಡೆಯೊಡ್ಡುತ್ತಿದಯೇ ಅನ್ನುವ ಅನುಮಾನ ಮೂಡುತ್ತಿದೆ.
Discussion about this post