ಕೆಲ ದಿನಗಳಿಂದ ನಟಿ ಪ್ರೇಮಾ ಅವರ ಎರಡನೇ ಮದುವೆ ಕುರಿತಂತೆ ವಿಪರೀತ ಸುದ್ದಿಗಳು ಹರಿದಾಡಿತ್ತು. ಪ್ರೇಮಾ ಅವರನ್ನು ಹತ್ತಿರದಿಂದ ಬಲ್ಲವರು ಇವೆಲ್ಲಾ ಸುಳ್ಳು ಸುದ್ದಿ. ಕೆಟ್ಟ ಮನಸ್ಥಿತಿಯ ಮಂದಿ ಕುಕೃತ್ಯ ಇದು ಎಂದು ಟೀಕಿಸಿದ್ದರು. ಜೊತೆಗೆ ಹಿರಿಯ ಪತ್ರಕರ್ತರೊಬ್ಬನ ಫೋಟೋ ಬಳಸಿ ಸೃಷ್ಟಿಸಿದ ಸುದ್ದಿಗೆ ಛೀ..ಥೂ ಎಂದು ಉಗಿದಿದ್ದರು ಕೂಡಾ.

ಹಾಗಿದ್ದರೂ ಪ್ರೇಮಾ ಅವರ ವೈಯುಕ್ತಿಕ ಬದುಕಿನ ಬಗ್ಗೆ ಇನ್ನಿಲ್ಲದಂತೆ ಸುಳ್ಳು ಸುದ್ದಿ ಹಬ್ಬಿಸುವುದು ನಿಂತಿರಲಿಲ್ಲ. ಕೇವಲ ಲೈಕ್, ಹಿಟ್ಸ್ ಗಳಿಗಾಗಿ ಮಾಡಿದ ಸುದ್ದಿ ಪ್ರೇಮಾ ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿತ್ತು.

ಹೀಗಾಗಿ ಇದೀಗ ಪ್ರೇಮಾ ಅವರ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಸ್ಪಷ್ಟನೆ ಕೊಟ್ಟಿದ್ದು, ಇವೆಲ್ಲವೂ ಸುಳ್ಳು ಸುದ್ದಿ, ಇದನ್ನು ನಂಬಬೇಡಿ ಎಂದು ಬರೆದುಕೊಂಡಿದ್ದಾರೆ.

ಹಿಂದೊಮ್ ಖಾಸಗಿ ವಾಹಿನಿಯಲ್ಲಿ ಮಾತನಾಡಿದ ಪ್ರೇಮಾ, ಮೊದಲ ಮದುವೆ ವಿಚಾರ ಏನಾಯ್ತು ಎಂದು ಹೇಳಲು ನನಗೆ ಇಷ್ಟವಿಲ್ಲ. ಅದು ನನ್ನ ಖಾಸಗಿ ವಿಷಯ. ಪ್ರಸ್ತುತ ನಾನು ಆರೋಗ್ಯವಾಗಿದ್ದೇನೆ , ನನಗೆ ಮಕ್ಕಳಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದರು.
Discussion about this post