777 ಚಾರ್ಲಿ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುವ ರಕ್ಷಿತ್ ಶೆಟ್ಟಿ, ಸಿನಿಮಾ ಬಿಡುಗಡೆಗಾಗಿ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಇದು ನನ್ನ ಡ್ರೀಮ್ ಪ್ರಾಜೆಕ್ಟ್ ಅಂದಿರುವ ರಕ್ಷಿತ್ ಶೆಟ್ಟಿ ಈಗಾಗಲೇ ಸಿನಿಮಾದ ಪ್ರಚಾರ ಕಾರ್ಯ ಪ್ರಾರಂಭಿಸಿದ್ದಾರೆ. ಸಪ್ಟಂಬರ್ ಅಥವಾ ಅಕ್ಟೋಬರ್ ಹೊತ್ತಿಗೆ ಸಿನಿಮಾ ಬಿಡುಗಡೆ ಮಾಡುವುದು ರಕ್ಷಿತ್ ಶೆಟ್ಟಿಯವರ ಗುರಿ. ಆದರೆ ಕೊರೋನಾ ಅಬ್ಬರದ ಕಾರಣದಿಂದ ವ್ಯತ್ಯಾಸವಾಗುವ ಸಾಧ್ಯತೆಗಳಿದೆ.
ಇನ್ನು ನಮ್ದು ಥಿಯೇಟರ್ ನಲ್ಲೇ ನೋಡಬೇಕಾದ ಸಿನಿಮಾ ಅನ್ನುವ ಮೂಲಕ ಯಾವುದೇ ಕಾರಣಕ್ಕೂ OTT ಗೆ ಚಾರ್ಲಿಯನ್ನು ಕೊಡೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ ಸಿನಿಮಾ ಕುರಿತಂತೆ ಇನ್ಸ್ಟಾದಲ್ಲಿ ಲೈವ್ ಬಂದಿದ್ದ ರಕ್ಷಿತ್ ಶೆಟ್ಟಿ ಸಿನಿಮಾ ಕುರಿತಂತೆ ಮಾತನಾಡಿದ್ದಾರೆ. ಜೊತೆಗೆ ಅಭಿಮಾನಿಗಳ ಪ್ರಶ್ನೆಗೂ ಉತ್ತರಿಸಿದ್ದಾರೆ. ಈ ಸಂದರ್ಭದಲ್ಲಿ ರಕ್ಷಿತ್ ಅಭಿಮಾನಿಗಳು ರಶ್ಮಿಕಾ ಅವರನ್ನು ಟಾರ್ಗೇಟ್ ಮಾಡಿ ಕಮೆಂಟ್ ಗಳನ್ನು ಮಾಡಿದ್ದಾರೆ.
ಕೆಲವೊಂದು ಕಮೆಂಟ್ ಗಳು ಓದಲು ಸಾಧ್ಯವಿಲ್ಲ ಅನ್ನುವ ಮಟ್ಟದಲ್ಲಿತ್ತು. ಪ್ರಾಣಿಗಳ ಹೋಲಿಸಿದ ಕಮೆಂಟ್ ಗಳೂ ಇತ್ತು. ಹೀಗಾಗಿ ಅಭಿಮಾನಿಗಳ ಅತಿರೇಕ ವರ್ತನೆಯಿಂದ ಬೇಸತ್ತ ರಕ್ಷಿತ್ ಶೆಟ್ಟಿ, ಫಾಸ್ಟ್ ಇಸ್ ಫಾಸ್ಟ್. ಮುಗಿದು ಹೋಗಿರೋದು ಮುಗಿದು ಹೋಯ್ತು ಅದರ ಬಗ್ಗೆ ಮಾತನಾಡಿ ಪ್ರಯೋಜನವಿಲ್ಲ. ಮೊದಲು ಮಾನವರಾಗೋಣ, ಅವರೆಲ್ಲರಿಗೂ ಅವರ ಜೀವನವಿದೆ ಅನ್ನುವುದನ್ನು ಅರಿತುಕೊಳ್ಳಿ ಎಂದು ಮನವಿ ಮಾಡಿದ್ದಾರೆ.
Discussion about this post