ಒಂದೆಡೆ ವಿರಾಟ್ ಕೊಹ್ಲಿ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ಗೆ ಸಿದ್ಧತೆಯನ್ನು ನಡೆಸುತ್ತಿದೆ. ಮತ್ತೊಂದು ಕಡೆ ಮಿಥಾಲಿ ರಾಜ್ ನೇತೃತ್ವದ ಮಹಿಳಾ ತಂಡ ಟೀಂ ಇಂಗ್ಲೆಂಡ್ ವಿರುದ್ಧ ಬುಧವಾರದಿಂದ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ.
ಭಾರತ ಹಾಗೂ ಇಂಗ್ಲೆಂಡ್ನಲ್ಲಿ ಕ್ವಾರಂಟೈನ್ ಪೂರೈಸಿರುವ ಮಹಿಳಾ ತಂಡ ವಾರಗಳ ಕಾಲ ಅಭ್ಯಾಸ ನಡೆಸಿದ್ದು ಇಂದು ಮಹತ್ವದ ಪಂದ್ಯವನ್ನಾಡಲಿದೆ.
ಏಳು ವರ್ಷಗಳ ಸುದೀರ್ಘ ಅವಧಿಯ ನಂತರ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಟೆಸ್ಟ್ ಸರಣಿಯನ್ನು ಆಡುತ್ತಿದೆ. ಈ ಮೂಲಕ 2014ರ ನವೆಂಬರ್ ಬಳಿಕ ಟೆಸ್ಟ್ ಕ್ರಿಕೆಟ್ ಆಡಿದ ಹಿರಿಮೆ ಮಿಥಾಲಿ ಟೀಮ್ ಪಾತ್ರವಾಗಲಿದೆ.
2014ರಲ್ಲಿ ಮೈಸೂರಿನಲ್ಲಿ ಭಾರತೀಯ ಮಹಿಳಾ ತಂಡ ಕೊನೆಯ ಬಾರಿಗೆ ದಕ್ಷಿಣ ಆಫ್ರಿಕಾ ವಿರುದ್ಧ ಟೆಸ್ಟ್ ಪಂದ್ಯವನ್ನಾಡಿತ್ತು. ಅಚ್ಚರಿ ಅಂದ್ರೆ ಅಂದಿನ ತಂಡದಲ್ಲಿದ್ದ 7 ಆಟಗಾರ್ತಿಯರು ಈ ಬಾರಿಯ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ.
ಭಾರತ ತಂಡ: ಮಿಥಾಲಿ ರಾಜ್ (ನಾಯಕಿ), ಸ್ಮೃತಿ ಮಂಧಾನ, ಹರ್ಮನ್ಪ್ರೀತ್ ಕೌರ್ (ಉಪನಾಯಕಿ), ಪುನಮ್ ರಾವತ್, ಪ್ರಿಯಾ ಪುನಿಯಾ, ದೀಪ್ತಿ ಶರ್ಮಾ, ಜೆಮಿಮಾ ರೊಡ್ರಿಗಸ್, ಶಫಾಲಿ ವರ್ಮಾ, ಸ್ನೇಹ ರಾಣಾ, ತಾನಿಯಾ ಭಾಟಿಯಾ (ವಿಕೆಟ್ ಕೀಪರ್), ಇಂದ್ರಾಣಿ ಗೋಸ್ ಜಮ್, ಶಿಖಾ ಪಾಂಡೆ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ಪೂನಂ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್
ಇಂಗ್ಲೆಂಡ್: ಹೀದರ್ ನೈಟ್ (ನಾಯಕಿ), ಎಮಿಲಿ ಅರ್ಲಾಟ್, ಟಮ್ಮಿ ಬ್ಯೂಮಾಂಟ್, ಕ್ಯಾಥರೀನ್ ಬ್ರಂಟ್, ಕೇಟ್ ಕ್ರಾಸ್, ಫ್ರೇಯಾ ಡೇವಿಸ್, ಸೋಫಿಯಾ ಡಂಕ್ಲೆ, ಸೋಫಿ ಎಕ್ಲೆಸ್ಟೋನ್, ಜಾರ್ಜಿಯಾ ಎಲ್ವಿಸ್, ಟ್ಯಾಶ್ ಫಾರಂಟ್, ಸಾರಾ ಗ್ಲೆನ್, ಆಮಿ ಜೋನ್ಸ್, ನ್ಯಾಟ್ ಸ್ಕಿವರ್ (ಉಪನಾಯಕಿ), ಅನ್ಯಾ ಶ್ರಬ್ಸೋಲ್, ಮ್ಯಾಡಿ ವಿಲಿಯರ್ಸ್, ಫ್ರಾನ್ ವಿಲ್ಸನ್, ಲಾರೆನ್ ವಿನ್ಫೀಲ್ಡ್-ಹಿಲ್.
Discussion about this post