ಒಂದೆಡೆ ಕೊರೋನಾ ಆತಂಕ, ಮತ್ತೊಂದು ಕಡೆ ಲಾಕ್ ಡೌನ್ ಕಾಟ. ಹಾಗಂತ ಮನೆಯಲ್ಲಿ ನೆಮ್ಮದಿಯಾಗಿ ಕೂತವರಿಗೆ ಮನೋರಂಜನೆಗೆ ಬರವಿಲ್ಲ.
ಒಂದು ಕಡೆ ಬಿಗ್ ಬಾಸ್ ಕಾರ್ಯಕ್ರಮ ಶುರುವಾಗುತ್ತಿದೆ. ಮತ್ತೊಂದು ಕಡೆ ರಿಯಲ್ ಸೆಲೆಬ್ರೆಟಿಗಳ ರಿಯಾಲಿಟಿ ಶೋ ರಾಜಾ ರಾಣಿಗೆ ವೇದಿಕೆ ಸಿದ್ದವಾಗಿದೆ. ಡ್ಯಾನ್ಸ್, ಮ್ಯೂಸಿಕ್ ಎಲ್ಲವನ್ನೂ ಮಿಕ್ಸ್ ಆಗಿರುವ ಕಾನ್ಸೆಪ್ಟ್ ಇದಾಗಿದ್ದು, ರಿಯಲ್ ಸೆಲೆಬ್ರೆಟಿ ಕಪಲ್ ಗಳನ್ನು ತೆರೆ ಮೇಲೆ ತರುವ ಪ್ರಯತ್ನ ಇದಾಗಿದೆ.
ಈಗಾಗಲೇ ಲಕ್ಷ್ಮಿ ಬಾರಮ್ಮ ಖ್ಯಾತಿಯ ನೇಹಾಗೌಡ ಹಾಗೂ ಅವರ ಪತಿ ಚಂದು ಅವರ ಪ್ರೋಮೋ ಹಾಗೂ ಮೈಸೂರು ದಸರಾ ಖ್ಯಾತಿಯ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ಪ್ರೋಮೋ ಬಿಡುಗಡೆಯಾಗಿದೆ.
Discussion about this post