ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕಿನ ಎರಡನೆ ಅಲೆಯ ಅಬ್ಬರ ಕಡಿಮೆಯಾಗುತ್ತಿದೆ. ಈ ನಡುವೆ ಅನ್ ಲಾಕ್ ಪ್ರಕ್ರಿಯೆಗಳು ಕೂಡಾ ಜಾರಿಯಲ್ಲಿದ್ದು, ಬೆಂಗಳೂರಿನಲ್ಲಿ ಈಗಾಗಲೇ ಅನ್ ಲಾಕ್ 1.O ನಿಯಮಗಳನ್ನು ಜಾರಿಗೆ ತರಲಾಗಿದೆ. ಮುಂದಿನ ಸೋಮವಾರದಿಂದ ಅಂದ್ರೆ ಜೂನ್ 21 ರಿಂದ ಅನ್ ಲಾಕ್ 2.O ನಿಯಮಗಳು ಜಾರಿಯಾಗಲಿದೆ. ಇದಕ್ಕಾಗಿ ಸಿದ್ದತೆಗಳು ಕೂಡಾ ನಡೆದಿದೆ.
ಜೂನ್ 21ರಿಂದ ಜಾರಿಯಾಗಲಿರುವ ಅನ್ ಲಾಕ್ 2.O ನಿಯಮಗಳಲ್ಲಿ ಇನ್ನೂ ಹೆಚ್ಚಿನ ವಿನಾಯಿತಿ ಸಿಗುವ ಸಾಧ್ಯತೆಗಳಿದೆ. ಈಗಾಗಲೇ ಬಹುತೇಕ ಕೈಗಾರಿಕೆಗಳು ಅಂಗಡಿಗಳು ತೆರೆದಿರುವುದರಿಂದ ಕಾರ್ಮಿಕರ ಓಡಾಟಕ್ಕೆ ಸಮಸ್ಯೆಯಾಗಿದೆ. ಹೀಗಾಗಿ ಬಿಎಂಟಿಸಿ ಓಡಾಟ ಪ್ರಾರಂಭಿಸಿ ಅನ್ನುವ ಆಗ್ರಹವೂ ಶುರುವಾಗಿದೆ. ಈ ಕಾರಣದಿಂದ ಲಾಕ್ಡೌನ್ ನಿಂದ ಸ್ಥಗಿತಗೊಂಡಿರುವ ಬಿಎಂಟಿಸಿ ಸಂಚಾರಕ್ಕೆ ಜೂನ್ 21ರಿಂದ ಅನುಮತಿ ಸಿಗಲಿದೆ ಅನ್ನಲಾಗಿದೆ.
ಒಂದು ವೇಳೆ ಬಿಎಂಟಿಸಿ ಸಂಚಾರಕ್ಕೆ ಅನುಮತಿ ನೀಡಿದರೆ ಶೇ50 ರಷ್ಟು ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಅನ್ನುವ ನಿಯಮ ಜಾರಿಯಾಗಲಿದೆ.
Discussion about this post