ಬೆಂಗಳೂರು : ರಾಜಧಾನಿಯನ್ನು ಬೆಚ್ಚಿ ಬೀಳಿಸಿದ ಬಿಬಿಎಂಪಿ ಮಾಜಿ ಸದಸ್ಯೆ ರೇಖಾ ಕದಿರೇಶ್ ಅವರ ಕೊಲೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇಡೀ ಘಟನೆಯನ್ನು ಸ್ಥಳೀಯರೊಬ್ಬರು ಮನೆಯ ಮೇಲ್ಬಾಗದಲ್ಲಿ ನಿಂತು ಮೊಬೈಲ್ ಮೂಲಕ ಚಿತ್ರೀಕರಿಸಿದ್ದಾರೆ.
ತಮ್ಮ ಕಚೇರಿ ಮುಂಭಾಗದಲ್ಲಿ ಆಹಾರ ಪೂರೈಸುತ್ತಿದ್ದ ರೇಖಾ ಕದಿರೇಶ್ ಅವರ ಮೇಲೆ ಮೂರು ಏಕಾಏಕಿ ಮುಗಿ ಬೀಳುತ್ತಾರೆ. ಮಾರಕಾಸ್ತ್ರ ಹಿಡಿದು ಆಕ್ರಮಣ ಮಾಡಿದ ದುಷ್ಕರ್ಮಿಗಳು ಕೊಚ್ಚಿ ಕೆಳಗೆ ಬೀಳಿಸುತ್ತಾರೆ. ಈ ವೇಳೆ ರಕ್ತದ ಮಡುವಿನಲ್ಲಿ ಬಿದ್ದ ರೇಖಾ ಬೇಡಿದರೂ ಕೇಳದೇ, ಬಿಡದ ಹಂತಕರು ಮತ್ತೆ ಚುಚ್ಚಲಾರಂಭಿಸುತ್ತಾರೆ. ಅದರಲ್ಲೊಬ್ಬ ಅದೇ ಜಾಗದಲ್ಲಿ ರೇಖಾ ಕದಿರೇಶ್ ಮೇಲೆ ಕುಳಿತು ಬರೋಬ್ಬರಿ ಏಳು ಬಾರಿ ಒಬ್ಬನೇ ಕುತ್ತಿಗೆಗೆ ಮನಸೋ ಇಚ್ಚೆ ಇರಿಯತ್ತಾನೆ.
ಈ ವೇಳೆ ಓರ್ವ ವ್ಯಕ್ತಿ ದೊಡ್ಡ ಪಾತ್ರೆ ಹಿಡಿದು ರೇಖಾ ಕದಿರೇಶ್ ರಕ್ಷಣೆಗೆ ಧಾವಿಸುತ್ತಾನೆ. ಆದರೆ ಮಾರಕಾಸ್ತ್ರ ಹಿಡಿದಿದ್ದ ಮತ್ತೋರ್ವ ದುಷ್ಕರ್ಮಿ, ರಕ್ಷಣೆಗೆ ಧಾವಿಸಿದ ವ್ಯಕ್ತಿ ಮೇಲೆ ಪ್ರಹಾರ ಮಾಡುತ್ತಾನೆ. ವಿಡಿಯೋ ವೀಕ್ಷಿಸಿದರೆ ರೇಖಾ ಕದಿರೇಶ್ ಅವರ ಹತ್ಯೆಗೆ ಮುಂಚೆಯೇ ಸಂಚು ರೂಪಿಸಲಾಗಿತ್ತು ಅನ್ನುವುದು ಸ್ಪಷ್ಟವಾಗುತ್ತದೆ. ರೇಖಾ ಕದಿರೇಶ್ ಕುತ್ತಿಗೆಗೆ ಇರಿಯುತ್ತಿರುವ ವೇಳೆ ಮತ್ತೊಬ್ಬ ಆಕೆ ತಪ್ಪಿಸಿಕೊಳ್ಳದಂತೆ ತಡೆಯುವ ಸಲುವಾಗಿ ರೇಖಾ ತಲೆ ಬಳಿಯೇ ಅಡ್ಡಗಟ್ಟಿ ನಿಂತಿರುತ್ತಾನೆ. ರೇಖಾ ಪ್ರಾಣಪಕ್ಷಿ ಹಾರಿಹೋಗಿರುವುದನ್ನು ಖಚಿತಪಡಿಸಿದ ಬಳಿಕ ಮೂವರು ಪರಾರಿಯಾಗುತ್ತಾರೆ
Discussion about this post