ಚಿತ್ರರಂಗದಿಂದ ದೂರವಿರುವ ಡೈಸಿ ಬೋಪಣ್ಣ ಅದೇನು ಮಾಡುತ್ತಿದ್ದಾರೆ ಅನ್ನೋದು ಗೊತ್ತಿಲ್ಲ. ಆದರೆ ಇದೀಗ ಸಾಮಾಜಿಕ ಜಾಲತಾಣಗಳಿಗೆ ಹಿಂತಿರುಗಿರುವ ಅವರು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
ಈ ನಡುವೆ ಡೈಸಿಯವರ ಕೂದಲಿಗೆ ಫಿದಾ ಆಗಿರುವ ಅಭಿಮಾನಿಗಳು ನಿಮ್ಮ ಗುಂಗುರು ಕೂದಲ ರಹಸ್ಯವೇನು ಎಂದು ಪ್ರಶ್ನಿಸುತ್ತಿದ್ದಾರೆ.
ಇದೀಗ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿರುವ ಅವರು, ಸಣ್ಣದೊಂದು ವಿಡಿಯೋ ಮೂಲಕ ಕೂದಲ ರಹಸ್ಯವನ್ನು ಅನಾವರಣ ಮಾಡಿದ್ದಾರೆ.ನೆಲ್ಲಿಕಾಯಿ ಬೃಂಗರಾಜ್ ಹಾಗೂ ಬ್ರಾಹ್ಮಿ ಹೊಂದಿರೋ ಪತಂಜಲಿ ಎಣ್ಣೆಯನ್ನು ಬಳಸುವ ಅವರು ಚೆನ್ನಾಗಿ ಮಸಾಜ್ ಮಾಡ್ತಾರಂತೆ. ಜೊತೆಗೆ ಒಳ್ಳೆಯ ನಿದ್ದೆ, ಆಹಾರದಲ್ಲಿ ವಿವಿಧ ರೀತಿಯ ಬೇಳೆ ಕಾಳು ಒಣ ಹಣ್ಣುಗಳನ್ನು ಸೇವಿಸುತ್ತಾರಂತೆ.
Discussion about this post