ಅಗ್ನಿಸಾಕ್ಷಿ ಧಾರಾವಾಹಿ ಅತ್ಯಂತ ಹೆಚ್ಚು ಟ್ರೋಲ್ ಆದ ಧಾರವಾಹಿಗಳ ಪೈಕಿ ಮೊದಲ ಸ್ಥಾನದಲ್ಲಿತ್ತು, ಮಾತ್ರವಲ್ಲದೆ ಟಿ.ಆರ್.ಪಿ ಪಟ್ಟಿಯಲ್ಲೂ ಅಗ್ನಿಸಾಕ್ಷಿ ಧಾರಾವಾಹಿ ದಾಖಲೆ ಬರೆದಿತ್ತು. ಅಗ್ನಿಸಾಕ್ಷಿ ಅದೆಷ್ಟು ಪ್ರಸಿದ್ಧಿಯಾಗಿತ್ತು ಇದರ ಟೈಟಲ್ ಸಾಂಗ್ ಅನ್ನು ಜನ ಈಗ್ಲೂ ಮರೆತಿಲ್ಲ. ಅಷ್ಟೇ ಅಲ್ಲದೆ ಈ ಧಾರಾವಾಹಿಯ ಪಾತ್ರಧಾರಿಗಳನ್ನು ಜನ ಸಿದ್ದಾರ್ಥ್, ಸನ್ನಿಧಿ ಎಂದೇ ಗುರುತಿಸುತ್ತಿದ್ದರು.
ಆದರೆ ಇದೀಗ ಧಾರಾವಾಹಿ ಮುಗಿದು ವರ್ಷಗಳೇ ಸಂದಿದೆ. ಅಗ್ನಿಸಾಕ್ಷಿಯ ಕಲಾವಿದರು ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ಸೂರ್ಯ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರೆ, ವೈಷ್ಣವಿ ಗೌಡ ಬಿಗ್ ಬಾಸ್ ಮನೆಯೊಳಗಿದ್ದಾರೆ. ಅನುಷಾ ರಾವ್ ಅವರು ಕನ್ನಡ ಕಿರುತೆರೆ ತೊರದು ಪರಭಾಷಾ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಚಿತ್ಕಲಾ ಬಿರಾದಾರ್ ಅವರು ಕನ್ನಡತಿ ಟೀಂ ಸೇರಿದ್ದಾರೆ. ರಾಜೇಶ್ವರಿ ಪಾರ್ಥಸಾರಥಿ ಸಪ್ತಪದಿ ತುಳಿದು ಆಸ್ಟ್ರೇಲಿಯಾಕ್ಕೆ ಹಾರಿದ್ದಾರೆ. ಪ್ರಿಯಾಂಕಾ ಶಿವಣ್ಣ ಸತ್ಯ ಧಾರಾವಾಹಿಯಲ್ಲಿ ನಟಿಸುತ್ತಿದ್ರೆ, ರಾಜೇಶ್ ಧ್ರುವ ಹಾಗೂ ಸುಕೃತಾ ನಾಗರಾಜ್ ಪ್ರಾಜೆಕ್ಟ್ ಗಳ ನಿರೀಕ್ಷೆಯಲ್ಲಿದ್ದಾರೆ.

ಈ ನಡುವೆ ತಮಿಳಿನಲ್ಲಿ ತಯಾರಾದ್ದ ಅಗ್ನಿ ಸಾಕ್ಷಿ ಈ ಬಾರಿ ಮರಾಠ ಭಾಷೆಗೆ ಕಾಲಿಡುತ್ತಿದೆ. ಈ ಮೂಲಕ ಕನ್ನಡದ ಧಾರಾವಾಹಿಯೊಂದು ಮರಾಠಿಯಲ್ಲಿ ಭಾಷೆಯಲ್ಲಿ ಶೀಘ್ರದಲ್ಲೇ ತಯಾರಾಗಲಿದೆ. ಅಂದ ಹಾಗೆ ಮರಾಠಿಯಲ್ಲಿ Sonyachi Pavale ಅನ್ನೋ ಟೈಟಲ್ ನಲ್ಲಿ ಧಾರಾವಾಹಿ ಪ್ರಸಾರವಾಗಲಿದೆ.
Discussion about this post