ಚಂದನವನದ ಬಹುಬೇಡಿಕೆಯ ನಟಿ ಅಶಿಕಾ ರಂಗನಾಥ್ ಕೈಯಲ್ಲಿ ಹಲವು ಪ್ರಾಜೆಕ್ಟ್ ಗಳಿದೆ. ಪ್ರಸ್ತುತ ಮದಗಜ ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದು, ಶ್ರೀಮುರಳಿ ಜೊತೆಗಿನ ನಟನೆ ಅವರಿಗೊಂದು ಹೆಸರು ತಂದುಕೊಡುವ ಸಾಧ್ಯತೆಗಳಿದೆ.

ಇನ್ನು ಆಗಸ್ಟ್ 5 ರಂದು ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ಅಶಿಕಾ ಅವರಿಗೆ ಮದಗಜ ಟೀಂ ಪೋಸ್ಟರ್ ಮೂಲಕ ಶುಭ ಕೋರಿದೆ. ಈ ಪೋಸ್ಟರ್ ನಲ್ಲಿ ಅಶಿಕಾ ರಂಗನಾಥ್ ಸಿಗರೇಟ್ ಸೇದುತ್ತಿದ್ದು ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

ಇಷ್ಟು ದಿನಗಳ ಕಾಲ ಮುಗ್ದ ಹುಡುಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಅಶಿಕಾ ರೌಡಿ ಬೇಬಿ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.

Discussion about this post