ಬೆಂಗಳೂರು : ಮಾಸ್ತಿ ಗುಡಿ ಸಿನಿಮಾ ದುರ್ಘಟನೆಯ ಬಳಿಕ ಮತ್ತೊಂದು ಕನ್ನಡ ಚಿತ್ರ ಶೂಟಿಂಗ್ ವೇಳೆ ದುರ್ಘಟನೆ ಸಂಭವಿಸಿದೆ. ಈ ದಘಟನೆಯಲ್ಲಿ ಫೈಟರ್ ಒಬ್ಬರು ಮೃತಪಟ್ಟಿದ್ದಾರೆ.
ರಚಿತಾ ರಾಮ್ ನಟನೆಯ ಲವ್ ಯೂ ರಚ್ಚು ಸಿನಿಮಾದ ಶೂಟಿಂಗ್ ರಾಮನಗರ ಜಿಲ್ಲೆಯ ಜೋಗನದೊಡ್ಡಿಯಲ್ಲಿ ನಡೆಯುತ್ತಿತ್ತು. ಈ ವೇಳೆ ವಿದ್ಯುತ್ ತಂತಿ ತಗುಲಿ ಫೈಟರ್ ವಿವೇಕ್ (28) ಮೃತಪಟ್ಟಿದ್ದಾರೆ.
ಅಜಯ್ ರಾವ್ ಮತ್ತು ರಚಿತಾ ರಾಮ್ ಅಭಿಯನದ ಚಿತ್ರ ಇದಾಗಿದ್ದು ರೋಪ್ ಎಳೆಯುವಾಗ ಫೈಟರ್ ವಿವೇಕ್ ಅವರಿಗೆ ವಿದ್ಯುತ್ ತಂತಿ ತಗುಲಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯ್ತು, ಆದ್ರೆ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ.
ವಿವೇಕ್ ತಮಿಳುನಾಡು ಮೂಲದವರು ಎಂದು ತಿಳಿದು ಬಂದಿದ್ದು, ಅವರ ಕುಟುಂಬಸ್ಥರಿಗಾಗಿ ಕಾಯಲಾಗುತ್ತಿದೆ.
Discussion about this post