ಮಹಾರಾಷ್ಟ್ರ : ದೇಶದಲ್ಲಿ ಕೊರೋನಾ ಸೋಂಕಿನ ಅಬ್ಬರ ದಿನದಿಂದ ದಿನಕ್ಕೆ ಏರುತ್ತಿದೆ. ಎರಡನೇ ಅಲೆ ನಿಯಂತ್ರಣಕ್ಕೆ ಬರಲಿದೆ ಅನ್ನುವ ಹೊತ್ತಿಗೆ ಮೂರನೇ ಅಲೆ ಪ್ರಾರಂಭವಾಗುವುದು ಖಚಿತ ಎನ್ನಲಾಗಿದೆ. ಈ ನಡುವೆ ದೇಶದಲ್ಲಿ ಕಳೆದ ಬಾರಿ ಡೆಲ್ಪಾ ರೂಪಾಂತರಿ ವೈರಸ್ ಅಟ್ಟಹಾಸದಿಂದ ಬಲಿಯಾದವರ ಸಂಖ್ಯೆ ಲೆಕ್ಕಕ್ಕಿಲ್ಲ.
ಈ ನಡುವೆ ಮುಂಬೈನಲ್ಲಿ ಡೆಲ್ಟಾ ಪ್ಲಸ್ ರೂಪಾಂತರಿ ವೈರಸ್’ಗೆ ಮೊಟ್ಟ ಮೊದಲ ಬಲಿಯಾಗಿದೆ ಅನ್ನುವ ಆತಂಕಕಾರಿ ಸುದ್ದಿ ಬಂದಿದೆ. ಗಮನಾರ್ಹ ಅಂಶ ಅಂದ್ರೆ ಡೆಲ್ಟಾ ಪ್ಲಸ್ ಗೆ ಬಲಿಯಾದ 63 ವರ್ಷದ ಮಹಿಳೆ 2 ಡೋಸ್ ಕೊರೊನಾ ಲಸಿಕೆ ಪಡೆದಿದ್ದಾರೆ ಅನ್ನಲಾಗಿದೆ. ಹಾಗಂತ ಈ ಸಾವು ಡೆಲ್ಟಾ ಪ್ಲಸ್ ನಿಂದ ಸಂಭವಿಸಿದೆ ಅನ್ನುವ ಹಾಗಿಲ್ಲ, ಯಾಕಂದ್ರೆ ಮೃತ ಮಹಿಳೆ ಇನ್ನಿತರ ಗಂಭೀರ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸುತ್ತಿದ್ದರಂತೆ. ಆದರೆ ಈ ಮಹಿಳೆಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ.
ಕಳೆದ ತಿಂಗಳು ರತ್ನಗಿರಿಯ 80 ವರ್ಷದ ಮಹಿಳೆ ಡೆಲ್ಟಾ ಪ್ಲಸ್ ಗೆ ಬಲಿಯಾಗಿದ್ದರು. ಹೀಗಾಗಿ ಮಹಾರಾಷ್ಟ್ರದ ಎರಡನೇ ಸಾವಾಗಿದೆ. 63 ವರ್ಷದ ಮಹಿಳೆ ಜುಲೈ 21 ರಂದು ಸೋಂಕಿಗೆ ತುತ್ತಾಗಿದ್ದರು. ಬಳಿಕ ಜುಲೈ 27 ರಂದು ಸೋಂಕಿಗೆ ಬಲಿಯಾಗಿದ್ದರು. ಈ ಮಹಿಳೆ ಕೆಲವು ವರ್ಷಗಳಿಂದ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಹೇಳಿದೆ
ಇದೀಗ ಮೃತ ಮಹಿಳೆಯ ಜೀನೋಮ್ ಸೀಕ್ವೆನ್ಸಿಂಗ್ ವರದಿ ಬಂದಿದ್ದು ಅವರಿಗೆ ಡೆಲ್ಟಾ ಪ್ಲಸ್ ತಗುಲಿದೆ ಎಂದು ಗೊತ್ತಾಗಿದೆ. ಇನ್ನು ಈ ಮಹಿಳೆಯ ಕುಟುಂಬದ ಆರು ಮಂದಿ ಸೋಂಕಿಗೆ ತುತ್ತಾಗಿದ್ದು ಒಬ್ಪರಿಗೆ ಡೆಲ್ಟಾ ಪ್ಲಸ್ ತಗುಲಿರುವುದು ದೃಢಪಟ್ಟಿದೆ. ಇನ್ನುಳಿದವರ ವರದಿಗಾಗಿ ಕಾಯಲಾಗುತ್ತಿದೆ.
Discussion about this post