crossorigin="anonymous"> ಜೋಹಾನ್ಸ್ಬರ್ಗ್ ನಿಂದ ಬೆಂಗಳೂರು ತನಕ ಅನ್ನ ಆಹಾರವಿಲ್ಲದೆ ಬಂದಿದ್ಯಾಕೆ ಸ್ಮಗ್ಲರ್ - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಜೋಹಾನ್ಸ್ಬರ್ಗ್ ನಿಂದ ಬೆಂಗಳೂರು ತನಕ ಅನ್ನ ಆಹಾರವಿಲ್ಲದೆ ಬಂದಿದ್ಯಾಕೆ ಸ್ಮಗ್ಲರ್

Radhakrishna Anegundi by Radhakrishna Anegundi
22-08-21, 5 : 47 am
in ಕ್ರೈಮ್
drugs
Share on FacebookShare on TwitterWhatsAppTelegram

ಬೆಂಗಳೂರು : ಮಾದಕ ವಸ್ತು ಮಾರಾಟ ತಡೆಯುವ ನಿಟ್ಟಿನಲ್ಲಿ ಇನ್ನಿಲ್ಲದ ಸರ್ಕಸ್ ನಡೆಯುತ್ತಿದೆ. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುವ ಸ್ಮಗ್ಲರ್ ಗಳು ಇನ್ನಿಲ್ಲದ ಐಡಿಯಾ ಮಾಡುತ್ತಾರೆ. ಶೂ ಸಾಕ್ಸ್, ಟೋಪನ್ ಎಂದು ಮಾದಕ ವಸ್ತು ತರೋದು ಹಳೆ ಐಡಿಯಾ. ಈಗ ಹೊಸ ಹೊಸ ಐಡಿಯಾಗಳನ್ನು ದಂಧೆಕೋರರು ಹುಡುಕಿಕೊಂಡಿದ್ದಾರೆ. ಇಡಬಾರದ ಜಾಗದಲ್ಲಿ ಡ್ರಗ್ಸ್ ಇಟ್ಟು ಬರುತ್ತಿದ್ದಾರೆ.

ಆದರೆ ಆರ್ಥಿಕ ಗುಪ್ತಚರ ಇಲಾಖೆ ಅಧಿಕಾರಿಗಳು ಶನಿವಾರ ಬೇಧಿಸಿದ ಪ್ರಕರಣ ಸಿಕ್ಕಾಪಟ್ಟೆ ಡಿಫರೆಂಟ್, ಹೊಟ್ಟೆಯಲ್ಲೇ ಮಾದಕ ದ್ರವ್ಯದ ಗುಳಿಗೆ ಹೊತ್ತು ಬಂದಿದ್ದ ಈತ ತನ್ನ ಕಕ್ಕದಿಂದಲೇ ಆ ಮಾತ್ರೆಗಳನ್ನು ಹೆಕ್ಕಬೇಕಾಗಿತ್ತು.

ಆಗಸ್ಟ್ 19ರಂದು ದಕ್ಷಿಣ ಆಫ್ರಿಕದ ಜೋಹಾನ್ಸ್​ಬರ್ಗ್ ವಿಮಾನ ನಿಲ್ದಾಣದಲ್ಲಿ ವಿಮಾನ ಏರಿದ್ದ ಈತ ನೇರವಾಗಿ ದುಬೈಗೆ ಬಂದಿದ್ದ. ಅಲ್ಲಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಆರ್ಥಿಕ ಗುಪ್ತಚರ ಇಲಾಖೆ (ಡಿಆರ್‌ಐ) ಅಧಿಕಾರಿಗಳು ಅಲರ್ಟ್ ಆಗಿದ್ದಾರೆ. ನೈಜೀರಿಯಾ ಪ್ರಜೆಯೊಬ್ಬ ಮಾದಕ ವಸ್ತು ತರುತ್ತಿದ್ದಾನೆ ಅನ್ನುವ ಮಾಹಿತಿಯ ಬೆನ್ನು ಹತ್ತಿ ಸಂಶಯಾಸ್ಪದ ವ್ಯಕ್ತಿಯನ್ನು ವಶಕ್ಕೆ ಪಡೆದು ಶೋಧ ನಡೆಸಿದ್ದಾರೆ. ಆದರೆ ಮಾದಕ ದ್ರವ್ಯ ವಸ್ತು ಪತ್ತೆಯಾಗಿಲ. ಎಲ್ಲೋ ಯಾಮಾರಿದ್ದೇವೆ ಎಂದು ಅಂದುಕೊಂಡ ಅಧಿಕಾರಿಗಳು ವಶಕ್ಕೆ ಪಡೆದ ವ್ಯಕ್ತಿಯ ಹೊಟ್ಟೆ ಸ್ಕ್ಯಾನ್ ಮಾಡಿದ್ದಾರೆ. ಆಗ ಹೊಟ್ಟೆಯಲ್ಲಿ ಅನುಮಾನಾಸ್ಪದ ಗುಳಿಗೆ ಇರುವುದು ಗೊತ್ತಾಗಿದೆ. ಬಳಿಕ ಪೆಡ್ಲರ್‌ ನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮಾತ್ರೆಗಳನ್ನು ಹೊರ ತೆಗೆಯಲಾಗಿದೆ.

ನಂತರ ಆರೋಪಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದರೆ, ನೈಜೀರಿಯಾ ಮೂಲದ ಪ್ರಜೆ, ಉಚಿತ ಆಹಾರ, ನೀರು, ತಂಪು ಪಾನಿಯ ಏನೂ ಸೇವಿಸಿಲ್ಲ. ಸೇವಿಸಿದ ಬಳಿಕ ಟಾಯ್ಲೆಟ್ ಗೆ ಹೋದರೆ ಹೊಟ್ಟೆಯೊಳಗಿನ ಮಾತ್ರೆಗಳು ಎಲಿ ಹೋಗಿ ಬಿಡುತ್ತದೋ ಅನ್ನುವ ಆತಂಕ ಅವನದ್ದು.

ಈ ವೇಳೆ ಡ್ರಗ್ಸ್ ದಂಧೆಯ ಬಗ್ಗೆ ನನಗೇನು ಗೊತ್ತಿಲ್ಲ ಅಂದಿರುವ ಆರೋಪಿ, ದಕ್ಷಿಣ ಆಫ್ರಿಕದಲ್ಲಿ ಅಪರಿಚಿತ ವ್ಯಕ್ತಿ ನನಗೆ ಡ್ರಗ್ಸ್ ಗುಳಿಗೆ ನುಂಗಿಸಿದ್ದಾನೆ. ಜೊತೆಗೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದು, ಅಲ್ಲಿ ಉಳಿದುಕೊಳ್ಳುವಂತೆ ಸೂಚಿಸಲಾಗಿತ್ತು.  ಆ ರೂಮ್‌ಗೆ ವ್ಯಕ್ತಿಯೊಬ್ಬ ಬಂದು ಮೊಬೈಲ್ ಕೊಡ್ತಾನೆ, ಬಳಿಕ ಆ ಮೊಬೈಲ್ ಗೆ ಬರೋ ಕರೆಯ ಸೂಚನೆ ಪಾಲನೆ ಮಾಡಿದರೆ ಹೊಟ್ಟೆಯಲ್ಲಿ ಇರುವ ಗುಳಿಗೆ ಹೊರ ಬರುತ್ತದೆ, ನಂತರ ಅದು ಎಲ್ಲಿಗೆ ಯಾರಿಗೆ ಸೇರಬೇಕೋ ಸೇರುತ್ತದೆ. ನಂತರ ನನಗೆ ಹಣ ಕೊಡುವುದಾಗಿ ಆ ವ್ಯಕ್ತಿ ಭರವಸೆ ನೀಡಿದ್ದ ಅಂದಿದ್ದಾನೆ.

ಇನ್ನು ಡ್ರಗ್ಸ್ ಗುಳಿಗೆ ಒಪನ್ ಮಾಡಿದರೆ ಒಟ್ಟು 11 ಕೋಟಿ ರೂ. ಮೌಲ್ಯದ 1.25 ಕೆಜಿ ಕೊಕೇನ್​ ಸಿಕ್ಕಿದೆ. ಅಂದ ಹಾಗೇ ಬಂಧಿತನಾಗಿರುವ 30 ವರ್ಷ ವ್ಯಕ್ತಿ ಕಿಡ್ನಿ ಚಿಕಿತ್ಸೆ ಸಲುವಾಗಿ ಹೆಲ್ತ್ ವೀಸಾ ಪಡೆದುಕೊಂಡು ಬೆಂಗಳೂರಿಗೆ ಬಂದಿದ್ದ. ಹಾಗಾದ್ರೆ ಆ ಆಸ್ಪತ್ರೆಗೂ ಈ ದಂಧೆಗೂ ಏನಾದರೂ ಸಂಬಂಧವಿದೆಯೇ ಅನ್ನುವುದು ಅನುಮಾನ.

Tags: drugs
Share1TweetSendShare

Discussion about this post

Related News

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 16 ಬಾಲ್ಯ ವಿವಾಹ ಪ್ರಕರಣಗಳು ದಾಖಲು

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ಎರಡು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ನವ ದಂಪತಿ ಕಾರು ಅಪಘಾತ : ಸ್ಥಳದಲ್ಲೇ ಕೊನೆಯುಸಿರೆಳೆದ ಪತ್ನಿ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ವಿಮಾನದಲ್ಲಿ ಬಂದು ಬೆಂಗಳೂರಿನಲ್ಲಿ ಕದಿಯುತ್ತಿದ್ದ ಯುಪಿ ಖದೀಮರ ಬಂಧನ

ಅತ್ತ ದರ್ಶನ್ ಬಳ್ಳಾರಿ ಜೈಲು ಸೇರಿದ ಬೆನ್ನಲ್ಲೇ ಇತ್ತ ಎಸಿಪಿ ಚಂದನ್ ಮುಂದೆ ಹಾಜರಾದ ಚಿಕ್ಕಣ್ಣ

ಜೈಲಲ್ಲಿ ದರ್ಶನ್’ಗೆ ಆತಿಥ್ಯ : ತನಿಖೆಯ ಮೇಲುಸ್ತುವಾರಿ ವಹಿಸಿಕೊಂಡ ಆಯುಕ್ತ ಬಿ. ದಯಾನಂದ್

ಕಾಂಗ್ರೆಸ್ ಸರ್ಕಾರದ ದುರಾಡಳಿತಕ್ಕೆ ಸಾಕ್ಷಿ : ಜೈಲಲ್ಲಿ ದರ್ಶನ್ ದರ್ಬಾರ್

ಅಪ್ಪನಿಂದ ಕಿರುಕುಳ ಮಗನಿಂದ ಅತ್ಯಾ*ಚಾರ | ರಿಪಬ್ಲಿಕ್ ಹಾಸನದ ಕಾಮಕಾಂಡ Karnataka sex tape scandal

ಐವರು ಮಂಗಳ ಮುಖಿಯರ ಅಟ್ಟಹಾಸ : ಮರ್ಮಾಂಗ ಕತ್ತರಿಸಿ ಲಿಂಗ ಪರಿವರ್ತನೆ

ತಾಯಿ ಮಗನ ಅಪಹರಣ : 9 ಮಂದಿ ಕ್ರಿಮಿನಲ್ ಗಳ ಬಂಧನ

ಪೊಲೀಸರ ನಿರ್ಲಕ್ಷ್ಯದಿಂದ ಬೇಸತ್ರ ಜನತೆ : ಫ್ಲೈ ಓವರ್ ನಿಂದ ವ್ಹೀಲಿಂಗ್ ಕೋರರ ಬೈಕ್ ಎಸೆದ ನಾಗರಿಕರು

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್