ಬೆಂಗಳೂರು : ಚಂದನವನದ ಡ್ರಗ್ಸ್ ಪ್ರಕರಣದ ತನಿಖೆ ದಿನದಿಂದ ದಿನಕ್ಕೆ ವಿಸ್ತಾರವಾಗುತ್ತಿದೆ. ಪೊಲೀಸರು ಬಗೆದಷ್ಟು ಆಳಕ್ಕಿಳಿಯುತ್ತಿರುವ ತನಿಖೆ ಮತ್ತಷ್ಟು ನಟ ನಟಿಯರಿಗೆ ಸಂಕಷ್ಟ ತಂದೊಡ್ಡಲಿದೆ ಅನ್ನಲಾಗಿದೆ. ಹೊಸ ಹೊಸ ಸೆಲೆಬ್ರೆಟಿಗಳ ಹೆಸರು ಇದೀಗ ಮುನ್ನಲೆಗೆ ಬಂದಿದೆ.
ಈ ನಡುವೆ ಗೋವಿಂದಪುರ ಡ್ರಗ್ಸ್ ಪ್ರಕರಣ ಸಂಬಂಧ ಇಂದು ಪೊಲೀಸರು ಅನೇಕ ಸೆಲಬ್ರೆಟಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ನಟಿ ಸೋನಿಯಾ ಅಗರ್ ವಾಲ್, ಡಿಜೆ ವಚನ್ ಚಿನ್ನಪ್ಪ, ಉದ್ಯಮಿ ಭರತ್ ಸೇರಿ ಅನೇಕರ ಮನೆಗಳ ಮೇಲೆ ಬೆಂಗಳೂರು ಪೂರ್ವ ವಿಭಾಗದ ಪೊಲೀಸರು ದಾಳಿ ಮಾಡಿದ್ದಾರೆ.
ಈ ಹಿಂದೆ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಡ್ರಗ್ ಪೆಡ್ಲರ್ ಥಾಮಸ್ ನೀಡಿದ ಮಾಹಿತಿ ಆಧಾರದಲ್ಲಿ ಈ ದಾಳಿ ನಡೆದಿದ್ದು, ರಾಜಾಜಿನಗರ, ಪದ್ಮನಾಭನಗರ, ಬೆನ್ಸನ್ ಟೌನ್ ಸೇರಿ ಅನೇಕ ಪ್ರದೇಶಗಳಲ್ಲಿ ದಾಳಿ ಮುಂದುವರಿದಿದೆ.
Discussion about this post