ಬೆಂಗಳೂರು : ಗೋವಿಂದಪುರ ಡ್ರಗ್ಸ್ ಪ್ರಕರಣ ಸಂಬಂಧ ದಾಳಿ ಮುಂದುವರಿಸಿರುವ ಪೊಲೀಸರು ಮೂವರು ಆರೋಪಿಗಳ ಮನೆಗೆ ದಾಳಿ ನಡೆಸಿದ್ದಾರೆ. ಈ ವೇಳೆ ಡಿಜೆ ವಚನ ಚನ್ನಪ್ಪ, ಭರತ್ ರನ್ನು ಅವರ ಮನೆಗಳಿಂದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಆದರೆ ರಾಜ್ ಕುಮಾರ್ ರಸ್ತೆಯಲ್ಲಿದ್ದ ಮತ್ತೊಬ್ಬ ಆರೋಪಿ ಸೋನಿಯಾ ಅಗರ್ ವಾಲ್ ಗೆ ಸೇರಿದ ಮನೆಗೆ ದಾಳಿ ನಡೆಸಿದರೆ, ಸೋನಿಯಾ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಕೆಲಸದವರ ಕಡೆಯಿಂದ ಮನೆಯ ಬಾಗಿಲು ತೆರೆಸಿದ ಪೊಲೀಸರು ಮನೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ. ಈ ವೇಳೆ 40 ಗ್ರಾಮ್ ಗಾಂಜಾ ಸಿಕ್ಕಿದೆ ಎನ್ನಲಾಗಿದೆ. ನಂತರ ಸೋನಿಯಾಗೆ ಕರೆ ಮಾಡಿದರೆ ಆಕೆಯ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ತಂದೆಗೆ ಕರೆ ಮಾಡಿದರೆ ಮಧ್ಯಾಹ್ನ ನಂತರ ಬರುವುದಾಗಿ ಹೇಳಿದ್ದಾರೆ. ಹೀಗಾಗಿ ಸೋನಿಯಾ ಎಲ್ಲಿದ್ದಾಳೆ ಎಂದು ಶೋಧ ನಡೆಸಿದರೆ ಐಟಿಸಿ ಗಾರ್ಡೇನಿಯಾ ಹೊಟೇಲ್ ನಲ್ಲಿ ಆಕೆ ಉಳಿದುಕೊಂಡಿರುವುದು ಗೊತ್ತಾಗಿದೆ.

ಅಲ್ಲಿಗೆ ಪೊಲೀಸರು ಹೋದರೆ, ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದ್ದಾಳೆ. ಅಷ್ಟೇ ಅಲ್ಲದೆ ನನಗೆ ಪೊಲೀಸರು ಹಿಂಸೆ ನೀಡಿದ್ದಾರೆ ಎಂದು ಮಾಧ್ಯಮದ ಮುಂದೆ ಹೋಗಬೇಕಾಗುತ್ತದೆ ಎಂದು ಪೊಲೀಸರನ್ನು ಬೆದರಿಸಿದ್ದಾಳೆ. ಇದಕ್ಕೆ ಜಗ್ಗದ ಪೊಲೀಸರು ಸೋನಿಯಾ ಅಗರ್ ವಾಲ್ ಳನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

ಈ ಸಂಬಂಧ ಪೊಲೀಸರು ಸೋನಿಯಾ ಉಳಿದುಕೊಂಡಿದ್ದ ಕೊಠಡಿಗೆ ತೆರಳಿದರೆ ಆಕೆ ಅಲ್ಲಿ ಇರಲಿಲ್ಲ. ವಾಶ್ ರೂಮ್ ಹುಡುಕಿದ್ರೂ ಅಲ್ಲಿರಲಿಲ್ಲ. ಕೊನೆಗೆ ಪುರುಷರ ಟಾಯ್ಲೆಟ್ ನಲ್ಲಿ ಆಕೆ ಅಡಗಿಕೊಂಡಿರುವುದು ಗೊತ್ತಾಗಿದೆ. ತಕ್ಷಣ ಮಹಿಳಾ ಸಿಬ್ಬಂದಿಯೊಂದಿಗೆ ತೆರಳಿದ ಪೊಲೀಸರು ಪುರುಷರ ಟಾಯ್ಲೆಟ್ ನಿಂದ ಈಕೆಯನ್ನು ವಶಕ್ಕೆ ಪಡೆದಿದ್ದಾರೆ.
Thomas had told the police about the roles of Sonial Agarwal, Bharath and Vachan Chinnappa. The accused are alleged to be procuring drugs and distributing it to celebrities, film actors
Discussion about this post