ಝೈರಾ ವಾಸೀಂ ಒಂದು ಕಾಲದಲ್ಲಿ ಬಾಲಿವುಡ್ ನಲ್ಲಿ ಸದ್ದು ಮಾಡಿದ ನಟಿ. ದಂಗಲ್, ಸಿಕ್ರೇಟ್ ಸೂಪರ್ ಸ್ಟಾರ್ ಸೇರಿದಂತೆ ಕೆಲ ಸಿನಿಮಾಗಳಲ್ಲಿ ಸದ್ದು ಮಾಡಿದ ಇವರು 2019ರಲ್ಲಿ ಇದ್ದಕ್ಕಿದಂತೆ ಬಾಲಿವುಡ್ ಗೆ ಗುಡ್ ಬೈ ಹೇಳಿದ್ದರು.
ಅಮೀರ್ ಖಾನ್ ಹಾಗೂ ಝೈರಾ ನಟನೆಯ ದಂಗಲ್ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. The Sky Is Pink ಝೈರಾ ಅಭಿನಯದ ಕೊನೆಯ ಸಿನಿಮಾ. ಈ ಚಿತ್ರದಲ್ಲಿ ಪ್ರಿಯಾಂಕ ಚೋಪ್ರಾ ಹಾಗೂ ಫರಾ ಅಖ್ತರ್ ಕಾಣಿಸಿಕೊಂಡಿದ್ದರು.
ತಮ್ಮ ಈ ನಿರ್ಧಾರಕ್ಕೆ ಅಂದು ಕಾರಣವನ್ನೂ ಹೇಳಿದ್ದ ಝೈರಾ, ನನಗೆ ನಾನು ಮಾಡುತ್ತಿರುವ ಕೆಲಸದ ಬಗ್ಗೆ ಪ್ರೀತಿ ಇಲ್ಲ, ಧಾರ್ಮಿಕತೆ ಹಾಗೂ ನನ್ನ ನಂಬಿಕೆಗೆ ಇದು ಧಕ್ಕೆ ತರುತ್ತಿದೆ ಹೀಗಾಗಿ ನಟನೆಯಿಂದ ದೂರ ಸರಿಯುತ್ತಿರುವುದಾಗಿ ಹೇಳಿದ್ದರು. ಇದೇ ವೇಳೆ ತನ್ನ ಎಲ್ಲಾ ಫೋಟೋಗಳನ್ನು ಡಿಲೀಟ್ ಮಾಡುವಂತೆ ಅಭಿಮಾನಿಗಳಲ್ಲಿ ಮನವಿ ಮಾಡಿದ್ದ ಅವರು ಬದುಕಿನಲ್ಲಿ ಹೊಸ Chapter ಒಂದನ್ನು ಪ್ರಾರಂಭಿಸುವುದಾಗಿ ಹೇಳಿದ್ದರು.
ಇದಾದ ಬಳಿಕ ತಮ್ಮ ಇನ್ಸ್ಟಾ ಖಾತೆಯಲ್ಲಿ quote ಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದರು. ಆದರೆ ಎಂದಿಗೂ ತಮ್ಮ ಫೋಟೋ ಹಂಚಿಕೊಂಡಿರಲಿಲ್ಲ. ಇದೀಗ ಎರಡು ವರ್ಷಗಳ ಬಳಿಕ ಝೈರಾ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಬುರ್ಖಾ ಧರಿಸಿರುವ ಅವರು ಕ್ಯಾಮಾರಗೆ ಬೆನ್ನು ಹಾಕಿದ್ದು ಬ್ರಿಡ್ಜ್ ಸಮೀಪ ಫೋಟೋ ತೆಗೆಯಲಾಗಿದೆ. ಇದಕ್ಕೆ The warm October sun ಎಂದು ಕ್ಯಾಪ್ಸನ್ ಕೊಟ್ಟಿದ್ದಾರೆ.
ಇದೀಗ ಈ ಫೋಟೋ ಹಲವು ಪ್ರಶ್ನೆಗಳಿಗೂ ಕಾರಣವಾಗಿದೆ.
Former actress Zaira Wasim, who quit Bollywood in 2019 surprised her followers by sharing her first picture in two years on Instagram. Zaira had announced in 2019 that she is quitting acting as she was unhappy with her occupation.
Discussion about this post