ಕರ್ನಾಟಕದ ಪೊಲೀಸ್ ಕಾನ್ಸ್ಟೆಬಲ್ಗಳು ಧರಿಸುತ್ತಿರುವ ಟೋಪಿಯಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ನೀಡಿರುವ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ಪೊಲೀಸ್ ಇಲಾಖೆ, ಟೋಪಿ ಬದಲಾವಣೆಗೆ ನಿರ್ಧರಿಸಿದೆ.
ಈ ಕುರಿತು ಇಂದು ನಡೆದ ಡಿಜಿ ಮತ್ತು ಐಜಿಪಿಗಳ ಸಭೆಯಲ್ಲಿ ಕಾನ್ ಸ್ಟೇಬಲ್ ಗಳಿಗೆ ಹೊಸ ಮಾದರಿಯ ಪಿ-ಕ್ಯಾಪ್ ಧರಿಸುವ ಕುರಿತು ಚರ್ಚೆ ನಡೆಸಲಾಗಿದೆ.
ಸಭೆಯಲ್ಲಿ ಕಾನ್ಸ್ಟೆಬಲ್ಗಳಿಗೆ ಹೊಸ ಮಾದರಿಯ ಪಿ-ಕ್ಯಾಪ್ ಧರಿಸಲು ಅವಕಾಶ ಮಾಡಿಕೊಟ್ಟು ಪರಿಶೀಲನೆ ನಡೆಸಲಾಯ್ತು. ಈ ಮೂಲಕ ಪೊಲೀಸ್ ಅಧಿಕಾರಿಗಳು ಬಳಸುವ ಮಾದರಿಯ ಕ್ಯಾಪ್ ಜಾರಿಗೆ ಸಿದ್ದತೆ ನಡೆಸಲಾಗಿದೆ.ಈ ಹಿನ್ನೆಲೆಯಲ್ಲಿ ತಮಿಳುನಾಡು ಹಾಗೂ ಕೇರಳ ಪೊಲೀಸರ ಮಾದರಿಯಲ್ಲಿ ಪಿ-ಕ್ಯಾಪ್ ಬಳಕೆಗೆ ಚಿಂತನೆ ಮಾಡಲಾಗಿದೆ.
ಪೊಲೀಸ್ ಪೇದೆಗಳು ಸದ್ಯ ಈ ಹಿಂದೆ ರೂಪಿಸಿದಂತಹ ಸ್ಲೋಚಾಟ್ನಂತಹ ಟೋಪಿಗಳನ್ನು ಧರಿಸುತ್ತಿದ್ದಾರೆ. ಅಂದುಕೊಂಡ ಹಾಗೇ ಎಲ್ಲವೂ ನಡೆದರ ಕೆಲವೇ ದಿನಗಳಲ್ಲಿ ರಾಜ್ಯದ ಪೊಲೀಸ್ ಕಾನ್ಸ್ಟೆಬಲ್ಗಳ ಟೋಪಿ ಸ್ಲೊಚಾಟ್ ಕ್ಯಾಪ್ನಿಂದ ಪಿ-ಕ್ಯಾಪ್ಗೆ ಬದಲಾವಣೆಯಾಗಲಿದೆ.
Discussion about this post