ಶೂಟಿಂಗ್ ನಡುವಿನ ಬಿಡುವಿನ ವೇಳೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟ ಶಂಕರ್ ಅಶ್ವಥ್ ಮನೆಗೆ ಭೇಟಿ ಕೊಟ್ಟಿದ್ದಾರೆ.
ಮೈಸೂರಿನ ಸರಸ್ವತಿಪುರಂನಲ್ಲಿರುವ ಶಂಕರ್ ಅಶ್ವಥ್ ನಿವಾಸಕ್ಕೆ ತೆರಳಿ ಉಪ್ಪಿಟ್ಟು ಕೇಸರಿಬಾತ್ ಸವಿದ ಪುನೀತ್, ಅವರ ತಾಯಿ, ದಿವಂಗತ ಅಶ್ವಥ್ ಅವರ ಪತ್ನಿ ಶಾರದಮ್ಮ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.
ಪುನೀತ್ ರಾಜ್ ಕುಮಾರ್ ಮೈಸೂರಿನಲ್ಲಿ ಯುವರತ್ನ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿದ್ದಾರೆ.
ಈ ವೇಳೆ, ಹಿರಿಯ ನಟ ಅಶ್ವಥ್ ಬದುಕಿದ್ದಾಗ ಪುನೀತ್ ತಂದೆ, ವರನಟ ಡಾ ರಾಜ್ಕುಮಾರ್ ಅವರು ಅಶ್ವಥ್ ಮನೆಗೆ ಹೋಗುತ್ತಿದ್ದುದನ್ನು ಸ್ಮರಿಸಿಕೊಂಡಿದ್ದಾರೆ.
ದಿವಂಗತ ಅಶ್ವಥ್ ಮನೆಯವರು ಮತ್ತು ರಾಜ್ಕುಮಾರ್ ಕುಟುಂಬದ ನಂಟಿನ ಬಗ್ಗೆ ಈ ವೇಳೆ ಮಾತುಕತೆ ನಡೆದಿದ್ದು ಈ ವೇಳೆ ಎಲ್ಲರೂ ಭಾವುಕರಾಗಿದ್ದಾರೆ. ಸುಮಾರು ಅರ್ಧ ಗಂಟೆಗಳ ಕಾಲ ಶಂಕರ್ ಅಶ್ವಥ್ ಮನೆಯಲ್ಲಿದ್ದ ಪುನೀತ್ ರಾಜ್ಕುಮಾರ್ ಕಾಲ ಕಳೆದಿದ್ದಾರೆ.
Discussion about this post