ಒಂದು ಮೊಟ್ಟೆಯ ಕಥೆ ಸಿನಿಮಾದ ಮೂಲಕ ಚಂದನವನದಲ್ಲಿ ಮಿಂಚಿದ್ದ ರಾಜ್ ಬಿ.ಶೆಟ್ಟಿ ಇದೀಗ ‘ಗುಬ್ಬಿ ಮೇಲೆ ಬ್ರಹ್ರ್ಮಾಸ್ತ್ರ’ ಚಿತ್ರದ ಮೂಲಕ ಮತ್ತೊಮ್ಮೆ ಜನರನ್ನು ರಂಜಿಸಲು ಬರುತ್ತಿದ್ದಾರೆ.
ಇದೀಗ ಗುಬ್ಬಿ ಮೇಲೆ ಬ್ರಹ್ರ್ಮಾಸ್ತ್ರ ಚಿತ್ರದ ಸೂಪರ್ ಡೂಪರ್ ರೊಮ್ಯಾಂಟಿಕ್ ವಿಡಿಯೊ ಸಾಂಗ್ ಬಿಡುಗಡೆಯಾಗಿದೆ.
ಸ್ವಾಗತಂ ಕೃಷ್ಣ ಅನ್ನೋ ರೊಮ್ಯಾಂಟಿಕ್ ವಿಡಿಯೋ ಹಾಡಿನಲ್ಲಿ ರಾಜ್ ಶೆಟ್ಟಿ ಮಾಡ್ರನ್ ಕೃಷ್ಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಸುಜಯ್ ಶಾಸ್ತ್ರಿ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿರುವ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಚಿತ್ರದಲ್ಲಿ ಮುಖ್ಯಭೂಮಿಕೆ ರಾಜ್ ಬಿ. ಶೆಟ್ಟಿ ಮತ್ತು ಕವಿತಾ ಗೌಡ ನಟಿಸಿದ್ದಾರೆ.

ಆದರೆ ಈಗ ಚಿತ್ರತಂಡಕ್ಕೆ ಶುಭಾ ಪೂಂಜಾ ಅವರ ಜತೆಗೆ ಕಾರುಣ್ಯಾ ರಾಮ್ ಮತ್ತು ರಚನಾ ಕೂಡ ಸಾಥ್ ನೀಡಿದ್ದಾರೆ.
ಹಾಗಂತ ಅವರ್ಯಾರೂ ಇಡೀ ಸಿನಿಮಾದಲ್ಲಿ ನಟಿಸಿಲ್ಲ. ಬದಲಿಗೆ, ಒಂದು ಹಾಡಿನಲ್ಲಿ ಹೆಜ್ಜೆ ಹಾಕುವ ಮೂಲಕ ಬ್ರಹ್ಮಾಸ್ತ್ರ ದ ಮೆರುಗು ಹೆಚ್ಚಿಸಿದ್ದಾರೆ.

‘ಕಥಾನಾಯಕಿ ಪರ್ಪಲ್ ಪ್ರಿಯಾ ಯಾವ ರೀತಿ ಇರಬಹುದು ಎಂಬುದನ್ನು ಹೀರೋ ರಾಜ್ ಬಿ. ಶೆಟ್ಟಿ ಕನಸಿನಲ್ಲಿ ಕಲ್ಪಿಸಿಕೊಳ್ಳುವಾಗ ಈ ಹಾಡು ಬರುತ್ತದೆ. ಅದರಲ್ಲಿ ಶುಭಾ ಪೂಂಜಾ, ಕಾರುಣ್ಯಾ ಮತ್ತು ರಚನಾ ಕಾಣಿಸಿಕೊಳ್ಳುತ್ತಾರೆ.

ಹಾಡಿಗೆ ಒಟ್ಟುಕೂಡು ವೆಂಕಟಸುಬ್ಬ ಐಯ್ಯರ್ ಮತ್ತು ಸುಜಯ್ ಶಾಸ್ತ್ರಿ ಲಿರಿಕ್ಸ್ ಬರೆದಿದ್ದು, ಮಣಿಕಾಂತ್ ಕದ್ರಿ ಸಂಗೀತಕ್ಕೆ ಮೈತ್ರಿ ಅಯ್ಯರ್ ದನಿ ಸೇರಿಸಿದ್ದಾರೆ.

ಇದೊಂದು ಕಾಮಿಡಿ ಜಾನರ್ ಸಿನಿಮಾವಾಗಿದ್ದು ಚಿತ್ರಕ್ಕೆ ಬೆಲ್ ಬಾಟಂ ಸಿನಿಮಾದ ‘ಸಗಣಿ ಪಿಂಟೋ’ ಖ್ಯಾತಿಯ ಸುಜಯ್ ಶಾಸ್ತ್ರೀ ನಿರ್ದೇಶನ ಮಾಡಿದ್ದು, ಟಿ.ಆರ್ ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ.
ಜುಲೈ ಮೊದಲ ವಾರದಲ್ಲಿ ಚಿತ್ರ ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
Discussion about this post