ನಟಿ ಶ್ರುತಿ ಹರಿಹರನ್ ದಂಪತಿ ತಮ್ಮ ಮಗಳ ನಾಮಕರಣ ಕಾರ್ಯವನ್ನು ನೆರವೇರಿಸಿದ್ದಾರೆ. ಸೋಮವಾರ ನಾಮಕರಣ ಕಾರ್ಯಕ್ರಮ ನಡೆದಿದ್ದು, ಶ್ರುತಿ ಹಾಗೂ ರಾಮ್ ತಮ್ಮ ಮಗಳಿಗೆ ‘ಜಾನಕಿ’ ಎಂದು ಹೆಸರಿಟ್ಟಿದ್ದಾರೆ.
ಕುಟುಂಬಸ್ಥರ ಸಮ್ಮುಖದಲ್ಲೇ ಸಾಂಪ್ರದಾಯಿಕವಾಗಿ ಈ ಕಾರ್ಯಕ್ರಮ ನಡೆದಿದೆ.
ರಾಮ್ ಈ ಕಾರ್ಯಕ್ರಮದಲ್ಲಿ ತಮ್ಮ ಮಗಳನ್ನು ಎತ್ತಿಕೊಂಡು ಶ್ರುತಿ ಹಾಗೂ ಕುಟುಂಬಸ್ಥರ ಜೊತೆ ಕುಳಿತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೆ ಅದಕ್ಕೆ, ನಾವು ಅತ್ಯುತ್ತಮ ಉಡುಗೊರೆಯಲ್ಲಿ ಒಂದನ್ನು ಸ್ವೀಕರಿಸಿ 28 ದಿನಗಳು ಕಳೆದಿವೆ. ಮತ್ತು ಅದು ಕುಟುಂಬದ ಪ್ರೀತಿ ಪಾತ್ರರ ಜೊತೆ ಸಂಭ್ರಮಾಚರಣೆಗೆ ಕರೆ ನೀಡುತ್ತದೆ. ಅಲ್ಲವೇ? ಎಂದು ಬರೆದುಕೊಂಡಿದ್ದಾರೆ.
Discussion about this post