ತೆರಿಗೆ ವಂಚನೆ ಆರೋಪದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಕೊಲೋರ್ಸ್ ಹೆಲ್ತ್ ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ನ ಶಾಖೆಗಳ ಮೇಲೆ ದಾಳಿ ನಡೆಸಿದ್ದಾರೆ.
ರಾಷ್ಟ್ರದಾದ್ಯಂತ ಸುಮಾರು 40 ಕಡೆ ಶೋಧ ಕಾರ್ಯಾಚರಣೆ ನಡೆಯುತ್ತಿದ್ದು, ಕೋಲರ್ಸ್ ಹೆಲ್ತ್ ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಡಿ.ವಿಜಯ್ ಕೃಷ್ಣ ಮತ್ತು ಜಿ.ನಾಗಚಂದ್ರ ವೆಂಕಟ ರಾಯುಡು ಅವರ ಒಡೆತನದಲ್ಲಿದೆ.
ವಿಜಯ್ ಕೃಷ್ಣ ಅವರು ನಟಿ ರಾಶಿಯ ಸಂಬಂಧಿಯಾಗಿದ್ದರಿಂದ, ಟಾಲಿವುಡ್ ಸೆಲೆಬ್ರಿಟಿಗಳ ನಿವಾಸದಲ್ಲೂ ಸರ್ಚ್ ಆಪರೇಷನ್ ನಡೆದಿದೆ.
ಒಂದು ಕಾಲದಲ್ಲಿ ಸೌತ್ ಸಿನಿರಂಗದಲ್ಲಿ ಮೆರೆದ ನಟಿ, ಆ ಬಳಿಕ ಕೊಲೋರ್ಸ್ ಹೆಲ್ತ್ ಕೇರ್ ಇಂಡಿಯಾ ಎಂಬ ಪ್ರೈವೆಟ್ ಕಂಪೆನಿಯಲ್ಲಿ ಪ್ರಮುಖ ಶೇರ್ ಪಾರ್ಟನರ್ ಆಗಿದ್ದರು.
ಕೊಲೋರ್ಸ್ ಹೆಲ್ತ್ ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ 49 ಶಾಖೆಗಳನ್ನು ಹೊಂದಿದ್ದು 1,500 ಕ್ಕೂ ಹೆಚ್ಚು ಆಹಾರ ತಜ್ಞರು ಮತ್ತು ಚಿಕಿತ್ಸಕರನ್ನು ಹೊಂದಿದೆ.
ದಾರಿತಪ್ಪಿಸುವ ಜಾಹೀರಾತುಗಳನ್ನು ಕೊಟ್ಟು ಸಾರ್ವಜನಿಕರನ್ನು ಮೋಸ ಮಾಡಿದ್ದಕ್ಕಾಗಿ ಕೋಲರ್ಸ್ ಹೆಲ್ತ್ ಕೇರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಅನ್ನು ನ್ಯಾಯಾಲಯಗಳು ಈ ಹಿಂದೆ ಶಿಕ್ಷಿಸಿತ್ತು.
ಫೆಬ್ರವರಿಯಲ್ಲಿ, ವಿಜಯವಾಡ ಗ್ರಾಹಕ ವೇದಿಕೆಯು ರಾಶಿ ಮತ್ತು ರಂಭಾ ಕಾಣಿಸಿಕೊಂಡಿರುವ ದಾರಿ ತಪ್ಪಿಸುವ ಜಾಹೀರಾತುಗಳನ್ನು ನಿಲ್ಲಿಸುವಂತೆ ಕಂಪನಿಗೆ ಆದೇಶಿಸಿತು.
ಇನ್ನು ರಾಶಿ ಮದುವೆಯಾದ ಬಳಿಕ ಬಣ್ಣದ ಲೋಕದಿಂದ ದೂರ ಸರಿದು ಹೆಲ್ತ್ ಕೇರ್ ಇಂಡಿಯಾ ಮೂಲಕ ಉದ್ಯಮಕ್ಕೆ ಕಾಲಿಟ್ಟಿದ್ದರು. ಅಲ್ಲದೆ ಈ ಕಂಪೆನಿಯ ಜಾಹೀರಾತುಗಳಲ್ಲಿ ನಟಿ ಬಣ್ಣ ಹಚ್ಚುವ ಮೂಲಕ ದಕ್ಷಿಣ ಭಾರತದಲ್ಲಿ ಮಾರುಕಟ್ಟೆ ಸೃಷ್ಟಿಸಿದ್ದರು.
ದಕ್ಷಿಣ ಭಾರತದಲ್ಲಿ 50ಕ್ಕೂ ಹೆಚ್ಚಿನ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ನಟಿ ರಾಶಿ ಕೊನೆಯ ಬಾರಿ ಕನ್ನಡದಲ್ಲಿ ಶಿವಣ್ಣ ಅಭಿನಯದ ‘ನಿನ್ನೇ ಪ್ರೀತಿಸುವೆ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು.
ಅದಕ್ಕೂ ಮುನ್ನ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ ‘ರಾಜ ನರಸಿಂಹ’, ‘ಜಮೀನ್ದಾರ್ರು’, ‘ಸ್ನೇಹ’ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಕನ್ನಡ ಹೊರತಾಗಿ ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರಗಳಲ್ಲಿ ನಾಯಕಿ, ಖಳನಾಯಕಿ, ಐಟಂ ಸಾಂಗ್ಗಳಲ್ಲೂ ಕಾಣಿಸಿಕೊಂಡಿದ್ದರು.
Discussion about this post