ನಟಿ ರಾಧಿಕಾ ಪಂಡಿತ್ ಎರಡನೇ ಮಗುವಿಗೆ ಅಕ್ಟೋಬರ್ 30 ರಂದು ಜನ್ಮ ಕೊಟ್ಟಿದ್ದರು. ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದ ರಾಧಿಕಾ ಬುಧವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಈ ವೇಳೆ ಮಗ ಹಾಗೂ ಮಗಳ ಜೊತೆಗೆ ಬಂದ ದಂಪತಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಎಲ್ಲರಿಗೂ ಧನ್ಯವಾದ ತಿಳಿಸಿದ ಯಶ್, ತಾಯಿ ಮಗು ಇಬ್ಬರೂ ಆರಾಮಾಗಿದ್ದಾರೆ. ಕಳೆದ ಬಾರಿ ರಾಧಿಕಾಗೆ ಮಗುವಾದಾಗ ಅಷ್ಟು ಸಮಯ ಸಿಕ್ಕಿರಲಿಲ್ಲ. ಆದರೆ, ಈ ಬಾರಿ ಶೂಟಿಂಗ್ ಬಿಟ್ಟು ಕಂಪ್ಲೀಟ್ ಆಗಿ ರಾಧಿಕಾ ಜೊತೆಲಿ ಇದ್ದುಬಿಟ್ಟೆ ಅಂದಿದ್ದಾರೆ.

ಯಾವಾಗಲೂ ಮಕ್ಕಳು ಅನ್ನೋದೇ ಸಂತೋಷ. ಆದರೆ ಮಕ್ಕಳನ್ನು ಲಕ್ ಅಥವಾ ಅದೃಷ್ಟ ಅನ್ನೋ ಮಾನದಂಡದಲ್ಲಿ ಅಳೆಯಲು ಸಾಧ್ಯವೇ ಇಲ್ಲ. ತಮ್ಮನ ಆಗಮನವಾಗಿರುವುದಕ್ಕೆ ಆಯ್ರಾ ಸಖತ್ ಖಯಷಿಯಾಗಿದ್ದಾಳಂತೆ. “ಆಯ್ರಾ ಖುಷಿಯಾಗಿದ್ದಾಳೆ. ಫ್ಲೈಯಿಂಗ್ ಕಿಸ್ ಎಲ್ಲಾ ಕೊಡುತ್ತಾಳೆ. ನನಗೆ ಹೆಣ್ಣು ಮಗು ಬೇಕು ಎನ್ನುವ ಆಸೆ ಇತ್ತು. ರಾಧಿಕಾಗೆ ಗಂಡು ಮಗು ಬೇಕು ಎನ್ನುವ ಆಸೆ ಇತ್ತು. ಈಗ ಇಬ್ಬರ ಆಸೆಯಂತೆ ಆಗಿದೆ,” ಅಂದಿದ್ದಾರೆ ಯಶ್.

ರಾಧಿಕಾ ನಾನು ಜನ್ಮ ಕೊಟ್ಟಿದ್ದು, ಆದರೆ ಯಾರು ನನ್ನ ತರ ಕಾಣಿಸುತ್ತಿಲ್ಲ ಎಂದು ಹೇಳುತ್ತಿದ್ದರು. ಆದರೆ ಎರಡು ಮಕ್ಕಳು ನನ್ನ ಥರನೇ ಇದ್ದಾರೆ. ಮಕ್ಕಳಾಗುವುದೇ ಭಾಗ್ಯ, ಗಂಡಾಗಲಿ-ಹೆಣ್ಣಾಗಲಿ ಮಕ್ಕಳು ಎಂದರೆ ಸಂತಸ ಎಂದು ಯಶ್ ಖುಷಿಯನ್ನು ಹಂಚಿಕೊಂಡರು.
ಈ ವೇಳೆ ರಾಧಿಕಾ ಮಾತನಾಡಿ, ನನ್ನ ಜೀವನದಲ್ಲಿ ತಾಯಿ ಎನ್ನುವುದು ಮುಖ್ಯವಾದ ಪಾತ್ರವಾಗಿದೆ. ಅದರಲ್ಲೂ ನನಗೆ ಎರಡನೇ ಬಾರಿ ಅವಕಾಶ ಸಿಕ್ಕಿದೆ. ನಿಜಕ್ಕೂ ತುಂಬಾ ಖುಷಿಯಾಗಿದೆ ಎಂದರು ಎಂದು ಎಲ್ಲರಿಗೂ ಧನ್ಯವಾದ ತಿಳಿಸಿದರು.
Discussion about this post