ಪಾಪಿ ಪಾಕಿಸ್ತಾನದಲ್ಲಿ ಇದೀಗ ಜನ ಟೊಮೆಟೋ ಅಂದ್ರೆ ಮಾರು ದೂರು ಓಡಿ ಹೋಗುವ ಪರಿಸ್ಥಿತಿ ಬಂದಿದೆ. ಫೆಬ್ರವರಿಯಲ್ಲಿ ಪುಲ್ವಾಮ ದಾಳಿ ನಡೆದ ಸಂದರ್ಭದಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಟೊಮೆಟೋ ರಫ್ತು ಮಾಡುವುದನ್ನು ನಿಲ್ಲಿಸಲು ವ್ಯಾಪಾರಸ್ಥರು ನಿರ್ಧರಿಸಿದ್ದರು. ಮಧ್ಯಪ್ರದೇಶದಿಂದ ದೊಡ್ಡ ಪ್ರಮಾಣದಲ್ಲಿ ಟೊಮೆಟೋ ಪಾಕಿಸ್ತಾನಕ್ಕೆ ರಫ್ತಾಗುತ್ತಿತ್ತು.
ಯಾವಾಗ ಭಾರತದಿಂದ ಟೊಮೆಟೋ ರಫ್ತಾಗುವುದು ನಿಂತಿತೋ ಪಾಕಿಸ್ತಾನದಲ್ಲಿ ಟೊಮೆಟೋ ದರ ಗಗನ ಮುಖಿಯಾಗತೊಡಗಿತು. ಇದೀಗ 1 ಕೆಜಿ ಟೊಮೆಟೋ ದರ 400 ರೂಪಾಯಿಯಾಗಿದೆ.
ಇದೀಗ ಟೊಮೆಟೋ ದರ ಇಳಿಸುವ ಸಲುವಾಗಿ ಇರಾನ್ ನಿಂದ ಟೊಮೆಟೋ ಆಮದು ಮಾಡಿಕೊಳ್ಳಲು ನಿರ್ಧರಿಸಲಾಗಿದೆ. 4500 ಟನ್ ಪೈಕಿ 989 ಟನ್ ಮಾತ್ರ ಪಾಕ್ ತಲುಪಿದೆ. ಅದು ಹಸಿದ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯಂತಾಗಿದೆ.
ಪಾಪಿ ಪಾಕಿಸ್ತಾನದಲ್ಲಿ ಸಾವಿರ ಸಮಸ್ಯೆಗಳಿದೆ ಆದರೂ ಉಗ್ರರನ್ನು ಪೋಷಿಸುವುದನ್ನು ಮಾತ್ರ ನಿಲ್ಲಿಸದಿರುವುದೇ ದುರಂತ.
Discussion about this post