ಚಂದನವನದಲ್ಲಿ ಇದೀಗ ಡಾಲಿ ಧನಂಜಯ್ ಸದ್ದು ಜೋರಾಗಿದೆ. 2007ರಲ್ಲಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಧನಂಜಯ್ ಡೈರೆಕ್ಟರ್ ಸ್ಪೆಷಲ್, ಜಯನಗರ 4th ಬ್ಲಾಕ್, ರಾಟೆ ಹೀಗೆ ಒಳ್ಳೆಯ ಸಿನಿಮಾದಲ್ಲಿ ನಟಿಸಿದವರು ಸದ್ದು ಮಾಡಿದ್ದು, ಶಿವಣ್ಣ ಅಭಿನಯದ ಟಗರು ಸಿನಿಮಾದಲ್ಲಿ. ಅಲ್ಲಿಂದ ಧನಂಜಯ್ ಡಾಲಿ ಧನಂಜಯ್ ಆಗಿ ಬದಲಾದರು.
ಇದೀಗ ಧನಂಜಯ್ ಅಂದ್ರೆ ಡಾಲಿ, ಡಾಲಿ ಅಂದ್ರೆ ಧನಂಜಯ್ ಅನ್ನುವ ಮಟ್ಟಿಗೆ ಅವರ ನೇಮ್ ಫೇಮ್ ಬೆಳೆದು ನಿಂತಿದೆ. ಮಾಸ್, ಕ್ಲಾಸ್ ಹೀಗೆ ಎಲ್ಲಾ ವರ್ಗದ ಜನ ಧನಂಜಯ್ ಅಭಿಮಾನಿಗಳಾಗಿದ್ದಾರೆ.
ಅದೆಷ್ಟರ ಮಟ್ಟಿಗೆ ಅಂದ್ರೆ ಇತ್ತೀಚೆಗೆ ಧನಂಜಯ್ ಟೆಕ್ ಮಹೀಂದ್ರದ ಕನ್ನಡ ಸಂಘ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಅಲ್ಲಿ ಧನಂಜಯ್ ಅವರನ್ನು ನೋಡಿದ ಟೆಕ್ಕಿಗಳು ಕೇಕೆ ಹಾಕಿದ್ದೇನು, ಶಿಳ್ಳೆ ಹೊಡೆದಿದ್ದೇನು. ಇಲ್ಲಿ ಕನ್ನಡ ಡಿಂಡಿಮ ಬಾರಿಸಿದ ಡಾಲಿಗೆ ಬಂದಿದ್ದು ಡೈಲಾಗ್ ಬೇಡಿಕೆ. ಈ ವೇಳೆ ಎನಾಯ್ತು ಅನ್ನುವುದನ್ನು ಈ ವಿಡಿಯೋದಲ್ಲಿ ನೋಡಿ.
Discussion about this post