ಸ್ಯಾಂಡಲ್ ವುಡ್ ರಾಕಿಂಗ್ ಜೋಡಿ ಯಶ್ ರಾಧಿಕಾ ಅವರಿಗೆ ಇಂದು ಮೂರನೇ ವರ್ಷದ ವಿವಾಹ ಸಂಭ್ರಮ. ನಂದಗೋಕುಲ ಧಾರಾವಾಹಿಯಲ್ಲಿ ಈ ಇಬ್ಬರೂ ಕಿರುತೆರೆಗೆ ಕಾಲಿಟ್ಟಿದ್ದರು.
ಆ ಧಾರಾವಾಹಿಯಲ್ಲಿ ಇಬ್ಬರ ನಟನೆ ನೋಡಿದ ಮಂದಿ ಭೇಷ್ ಅಂದಿದ್ದರು. ಬಳಿಕ ಅವರಿಬ್ಬರೂ ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಪಡೆದರು. ಚಂದನವನದಲ್ಲಿ ಅದೃಷ್ಟ ಪರೀಕ್ಷೆಗಿಳಿದ ಅವರನ್ನು ಜನ ಪ್ರೀತಿಯಿಂದ ಸ್ವಾಗತಿಸಿದರು.

ಅಂದ ಹಾಗೇ ರಾಕಿಂಗ್ ಸ್ಟಾರ್ ಹಾಗೂ ರಾಧಿಕಾ ಪಂಡಿತ್ ಅವರದ್ದು ಒಂದು ದಶಕಕ್ಕೂ ಹಳೆಯ ಪರಿಚಯ. ಒಂದೇ ಧಾರಾವಾಹಿ ಮೂಲಕ ವೃತ್ತಿ ಜೀವನ ಆರಂಭಿಸಿದ ಇವರಿಬ್ಬರು, ಒಂದೇ ಸಿನಿಮಾದ ಮೂಲಕ ಇಂಡಸ್ಟ್ರಿಗೂ ಎಂಟ್ರಿ ಕೊಟ್ಟಿದ್ದರು. ಬಳಿಕ ಒಟ್ಟಿಗೆ ಒಂದೇ ಮಂಟಪದಲ್ಲಿ ವೈವಾಹಿಕ ಜೀವನಕ್ಕೂ ಕಾಲಿಟ್ಟರು.
ಇದೀಗ ಅವರ ದಾಂಪತ್ಯ ಜೀವನಕ್ಕೆ ಮೂರನೇ ವರ್ಷದ ಸಂಭ್ರಮ.
ಈ ಸಂದರ್ಭದಲ್ಲಿ ಅವರಿಬ್ಬರ ಲವ್ ಸ್ಟೋರಿಯನ್ನ ನಾವು ಹೇಳುತ್ತೇವೆ. ಇದು ನಟ ನೀನಾಸಂ ಸತೀಶ್ ಬಹಿರಂಗ ಪಡಿಸಿದ ಪ್ರೇಮ ಕಥೆ.
ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಪ್ರೀತಿ ಹೇಗಿತ್ತು ಅಂತ ನೋಡಿದವರಲ್ಲಿ ನಟ ನೀನಾಸಂ ಸತೀಶ್ ಪ್ರಮುಖರು. ಯಾಕಂದ್ರೆ, ಯಶ್-ರಾಧಿಕಾ ಅವರ ಪ್ರೀತಿಯ ಪರಿಚಯ ಮೊದಲಾಗಿದ್ದು ಸತೀಶ್ ಅವರಿಗಂತೆ.
ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ 5 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಆದ್ರೆ, ಆ ಪ್ರೀತಿ ಹೊರಬಿದ್ದಿದ್ದು ‘ಡ್ರಾಮಾ’ ಚಿತ್ರದ ಟೈಮ್ ನಲ್ಲಿ
ಯಶ್ ಗೆ ತಿಳಿಯದಂತೆ ರಾಧಿಕಾ, ರಾಧಿಕಾಗೆ ತಿಳಿಯದಂತೆ ಯಶ್, ತಮ್ಮ ಪ್ರೀತಿಯನ್ನು ಸತೀಶ್ ಅವರ ಬಳಿ ಹೇಳಿಕೊಳ್ಳುತ್ತಿದ್ದರು.
ಇನ್ನು ಇದೇ ಡ್ರಾಮಾ’ ಚಿತ್ರದ ಚಿತ್ರೀಕರಣದ ವೇಳೆ ಯಶ್, ರಾಧಿಕಾ ಪಂಡಿತ್’ ಅವರಿಗೆ ಪ್ರಪೋಸ್ ಮಾಡಿದ್ದರು.
‘ಡ್ರಾಮಾ’ ಚಿತ್ರೀಕರಣದ ಗ್ಯಾಪ್ನಲ್ಲೇ ಒಮ್ಮೆ ಕಾರಿನ ಮೇಲೆ ಹೂವಿಟ್ಟು ತಮ್ಮ ಪ್ರೀತಿಯನ್ನು ಹೇಳಿಯೇಬಿಟ್ರಂತೆ ರಾಕಿಂಗ್ ಸ್ಟಾರ್. ಇನ್ನೂ ಪ್ರೊಪೋಸ್ ಮಾಡಿದ್ದು, ತಮ್ಮ ಮನಸ್ಸಿನಲ್ಲೇ ಇದ್ದ ಹುಡುಗ ಅಂದ್ಮೇಲೆ, ರಾಧಿಕಾ ಪಂಡಿತ್ ಅವರು ಕೂಡ ಒಪ್ಪಿಗೆ ಸೂಚಿಸಿದ್ದರಂತೆ.
Discussion about this post