ನಿರ್ದೇಶಕ ಪವನ್ ಒಡೆಯರ್ ಲವ್ ಸ್ಟೋರಿ ಸಿನಿಮಾಗೆ ಲವ್ ಗುರು ಇದ್ದಂತೆ. ಪವನ್ ನಿರ್ದೇಶನದ ಯಾವುದೇ ಚಿತ್ರವಾದ್ರೂ ಮನಸ್ಸಿಗೆ ಮುದ ನೀಡುವ ನವಿರಾದ ಪ್ರೀತಿಯ ಕಥೆ ಇರುತ್ತದೆ.
ಇದಕ್ಕೊಂದು ಬೆಸ್ಟ್ ಎಕ್ಸಾಂಪಲ್ ‘ಗೂಗ್ಲಿ’ ಈ ತಲೆಮಾರಿನ ಲವ್ ಸ್ಟೋರಿಗೆ ಓಂಕಾರ ಬರೆದ ಚಿತ್ರವದು. ಗೂಗ್ಲಿ ಬಾಕ್ಸ್ ಆಫೀಸ್ ನಲ್ಲಿ ಕಿಂಗ್ ಆದ ಚಿತ್ರವದು. ನಂತ್ರ ಪವನ್ ಒಡೆಯರ್ ಹಾರರ್, ಆ್ಯಕ್ಷನ್, ಕಾಮಿಡಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ರು. ಇದೀಗ ಹಳೆಯ ಗತ್ತಿನೊಂದಿಗೆ ‘ರೇಮೊ’ದಲ್ಲಿ ಕಂಬ್ಯಾಕ್ ಮಾಡುತ್ತಿದ್ದಾರೆ.
ನಿರ್ಮಾಪಕ ಸಿ.ಆರ್ ಮನೋಹರ್ ಸಹೋದರ ರೋಗ್ ಖ್ಯಾತಿಯ ಇಶಾನ್ ಹಾಗೂ ಅಶಿಕಾ ಒಟ್ಟಿಗೆ ನಟಿಸ್ತಿರೋ ‘ರೇಮೊ’ ಶೂಟಿಂಗ್ ಇದೀಗ ಭರದಿಂದ ಸಾಗುತ್ತಿದೆ. ಸದ್ಯ ರೇಮೊ ಟೀಂ ಸೌತ್ ಆಫ್ರಿಕಾದಲ್ಲಿ ಬೀಡು ಬಿಟ್ಟಿದ್ದು, ಜೋಹನ್ಸ್ಬರ್ಗ್, ಡರ್ಬನ್, ಕೇಪ್ಟೌನ್ನಲ್ಲಿ ಶೂಟಿಂಗ್ ನಡೆಸ್ತಿದೆ. ಆಫ್ರಿಕಾ ಮಂದಿಯ ಬಾಯಲ್ಲೂ ‘ರೇಮೊ’ ಹೆಸ ಕೇಳಿಸುತ್ತಿದೆ ಅಂದ್ರೆ ಊಹಿಸಿಕೊಳ್ಳಿ.
ಬರೀ ಆಫ್ರಿಕಾವಲ್ಲ ಸಿನಿಮಾದ ಫಸ್ಟ್ ಹಾಫ್ ಶೂಟಿಂಗ್ ಹತ್ತಾರು ದೇಶಗಳಲ್ಲಿ ನಡೆಯಲಿದೆ. ಹಾಡು ಹಾಗೂ ಆ್ಯಕ್ಷನ್ ಸೀಕ್ವೆನ್ಸ್ ಚಿತ್ರೀಕರಣವೂ ನಡೀತಿದೆ. ಅದ್ರ ಎಕ್ಸ್ ಕ್ಲೋಸೀವ್ ಝಲಕ್ ನ ಚಿತ್ರತಂಡ ರಿಲೀಸ್ ಮಾಡಿದೆ.
ಇನ್ನು ಸಹೋದರನ ಸಿನಿಮಾವಾಗಿರುವ ಕಾರಣದಿಂದ ಸಿ ಆರ್ ಮನೋಹರ್ ದೊಡ್ಡ ಮೊತ್ತದಲ್ಲೇ ಸಿನಿಮಾ ನಿರ್ಮಿಸುತ್ತಿದ್ದಾರೆ.
ಇನ್ನು ರೇಮೊ ಬಗ್ಗೆ ನಿರ್ದೇಶಕ ಪವನ್ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ‘ಸಿನಿಮಾದ ಮೇಕಿಂಗ್ ರಿಚ್ ಆಗಿ ಬರ್ತಿದೆ. ರಿಚ್ ಸಿನಿಮಾದ ಅನ್ನೋದಲ್ಲೆ ನಮ್ಮ ಸಿನಿಮಾ ಬೆಸ್ಟ್ ಎಕ್ಸಾಂಪಲ್ ಆಗಲಿದೆ. ಯಾಕೆಂದ್ರೆ ರಿಚ್ ಮೇಕಿಂಗ್ ಜೊತೆಗೆ, ರಿಚ್ ಕಥೆ ಸಿನಿಮಾದಲ್ಲಿದೆ.
ಆಶಿಕಾ – ಇಶಾನ್ ಜೋಡಿ ತುಂಬಾನೇ ಫ್ರೆಶ್ ಆಗಿದ್ದು, ಈ ಜೋಡಿ ದೊಡ್ಡ ಮ್ಯಾಜಿಕ್ ಮಾಡಲಿದೆ. ಇಶಾನ್ ಪ್ರಾಮಿಸಿಂಗ್ ಸ್ಟಾರ್ ಆಗಿ ನಿಲ್ತಾರೆ. ನಿರ್ಮಾಪಕ ಸಿ.ಆರ್.ಮನೋಹರ ಸಿನಿಮಾಗೆ ಸಿಕ್ಕಾಪಟ್ಟೆ ಬಂಡವಾಳ ಹೂಡುತ್ತಿದ್ದಾರೆ. ಸಹೋದರ ಇಶಾನ್ ಸಿನಿಮಾವಾದ್ರಿಂದ ಮನೋಹರ್ ಪ್ರತಿ ಶೂಟಿಂಗ್ನಲ್ಲೂ ಜೊತೆಯಲ್ಲಿ ನಿಲ್ತಾರೆ’ ಅಂದಿದ್ದಾರೆ.
ಈಗಾಗಲೇ ದಕ್ಷಿಣ ಆಫ್ರಿಕಾದಲ್ಲಿ ಚಿತ್ರೀಕರಣ ಮುಕ್ತಾಯದ ಹಂತ ತಲುಪಿದ್ದು ಚಿತ್ರತಂಡ ಕೆಲವೇ ದಿನಗಳಲ್ಲಿ ಕರ್ನಾಟಕಕ್ಕೆ ಮರಳಲಿದೆ,
Discussion about this post