crossorigin="anonymous"> ಟಗರು ಗುನ್ನಾಗಿಂತ ಜೋರಾಗಿದೆ ಸಲಗ ಘರ್ಜನೆ...!!!ಭರವಸೆ ಹೆಚ್ಚಿಸಿದ ಸಲಗ ಮೇಕಿಂಗ್ ವಿಡಿಯೋ..!!! - Torrent Spree
Torrent Spree
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್
No Result
View All Result
Torrent Spree
No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
  • ಕ್ರೈಮ್
  • ಮನೋರಂಜನೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

ಟಗರು ಗುನ್ನಾಗಿಂತ ಜೋರಾಗಿದೆ ಸಲಗ ಘರ್ಜನೆ…!!!ಭರವಸೆ ಹೆಚ್ಚಿಸಿದ ಸಲಗ ಮೇಕಿಂಗ್ ವಿಡಿಯೋ..!!!

Radhakrishna Anegundi by Radhakrishna Anegundi
18-12-19, 12 : 40 pm
in ಮನೋರಂಜನೆ
Share on FacebookShare on TwitterWhatsAppTelegram

ಭಾರಿ ನಿರೀಕ್ಷೆ ಮತ್ತು ಕುತೂಹಲ ಹುಟ್ಟಿಸಿದ್ದ ಸಲಗ ಮೇಕಿಂಗ್ ವಿಡಿಯೋ ನಿಗದಿಯಂತೆ ಇಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಿದೆ. ನಾಯಕ, ನಿರ್ದೇಶಕ ದುನಿಯಾ ವಿಜಯ್ ಮನೆಯಂಗಳದಲ್ಲಿ, ಎ2 ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ಸಲಗ ಮೇಕಿಂಗ್ ವಿಡಿಯೋ ಲೋಕಾರ್ಪಣೆಯಾಗಿದೆ.

ಸಲಗ ಮೇಕಿಂಗ್ ವಿಡಿಯೋಗೆ ಅನ್ ಲೈನ್ ನಲ್ಲಿ ಒಳ್ಳೆಯ ರೆಸ್ಪಾನ್ಸ್ ವ್ಯಕ್ತವಾಗ್ತಿದೆ. ಸಲಗ ಮೇಕಿಂಗ್ ವಿಡಿಯೋಗೇನೇ ಕನ್ನಡ ಸಿನಿಪ್ರಿಯರಿಂದ ಶಿಳ್ಳೆ, ಚಪ್ಪಾಳೆಯ ಸುರಿ ಮಳೆ ಸುರಿಯುತ್ತಿದೆ.

ಇದೊಂದು ಮೇಕಿಂಗ್ ವಿಡಿಯೋ ಸಲಗ ಸಿನಿಮಾದ ರೇಂಜ್ ಏನು ಅನ್ನೋದನ್ನ  ಹೇಳ್ತಿದೆ. ಹಸಿದ ಸಿಂಹದಂತೆ ದುನಿಯಾ ವಿಜಯ್ ಮೈಕೆಡವಿಕೊಂಡು, ಇದು ನನ್ನ ಫ್ಲೇವರ್, ಇದು ನನ್ನ ಖದರ್, ಇದು ನನ್ನ ಸಿನಿಮಾ, ನನ್ನ ಕನ್ನಡ ಸಿನಿಪ್ರಿಯರು ನೋಡಬಯಸುವಂತಹ ಸಿನಿಮಾ. ಅಂತ ಗ್ರೌಂಡ್ ಗಿಳಿದು, ಹೋಂ ವರ್ಕ್ ಮಾಡಿ, 100 ಪರ್ಸೆಂಟ್ ಗೆಲ್ಲೋ ಸೂತ್ರದಲ್ಲಿ, ಮೆಗಾ ಹಿಟ್ ಕಾಂಬಿನೇಷನ್ ನಲ್ಲಿ ಮಾಡಿರೋ ಸಿನಿಮಾ ಸಲಗ. ಟೈಟಲ್ಲೇ ಹೇಳುವಂತೆ ಸಲಗ ಬಲದಲ್ಲಿ, ಛಲದಲ್ಲಿ ಮಾಡಿರುವಂತಹ ಸಿನಿಮಾ. ನಡೆದದ್ದೇ ದಾರಿ ಅನ್ನೋ ಟ್ಯಾಗ್ ಲೈನ್ ಇರೋ ಸಲಗ ಚಿತ್ರದ ಮೇಕಿಂಗ್ ಆ ಅಟಿಟ್ಯೂಡ್ ನ ತೋರಿಸ್ತಿದೆ.

ಟಗರುನಂತಹ ಮೆಗಾ ಹಿಟ್ ಸಿನಿಮಾ ಕೊಟ್ಟಂತಹ ನಿರ್ಮಾಪಕ ಕೆ.ಪಿ ಶ್ರೀಕಾಂತ್, ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆಗೆ ದುನಿಯಾ ವಿಜಯ್ ಮತ್ತು ಟಗರು ಚಿತ್ರದಿಂದ ಸ್ಟಾರ್ ಪಟ್ಟಕ್ಕೇರಿದ ಡಾಲಿ ಧನಂಜಯ ಕಾಂಬಿನೇಷನ್ ನಲ್ಲಿ ತಯಾರಾಗ್ತಿರೋವಂತಹ ಸಿನಿಮಾ ಇದಾಗಿದೆ.

ಟ್ರೆಂಡಿ ಡೈಲಾಗ್ಸ್ ಗೇ ಕೇರ್ ಆಫ್ ಅಡ್ರೆಸ್ ಆಗಿರೋ ಮಾಸ್ತಿ ಮಂಜು ಡೈಲಾಗ್ಸ್ ಸಲಗ ಚಿತ್ರಕ್ಕಿದ್ದು,  ಶಿವಸೇನ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ. ಈ ಚಿತ್ರದಲ್ಲಿ ನಾಯಕಿಯಾಗಿ ಪ್ರತಿಭಾವಂತ ನಟಿ ಸಂಜನಾ ಆನಂದ್ ಅಭಿನಯಿಸಿದ್ದು, ರಂಗಾಯಣ ರಘು, ಅಚ್ಯುತ್ ಕುಮಾರ್, ನಾಗಭೂಷಣ್, ಯಶ್ ಶೆಟ್ಟಿ  ಮುಖ್ಯಭೂಮಿಕೆಯಲ್ಲಿದ್ದಾರೆ. ಈ ಚಿತ್ರದಲ್ಲಿ ಟಗರು ಖ್ಯಾತಿಯ ಕಾಕ್ರೋಚ್ ವಿಶಿಷ್ಠ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಡಾಲಿ ಧನಂಜಯ್ ಇದೇ ಮೊದಲ ಬಾರಿಗೆ ಖಾಕಿ ತೊಟ್ಟು ಮಿಂಚಿರೋದು ಸಲಗ ಹೈಲೈಟ್ ಗಳಲ್ಲೊಂದಾಗಿದೆ.

ಇನ್ನು ಸಲಗ ಚಿತ್ರದ ಮೇಕಿಂಗ್ ವಿಡಿಯೋ ತುಂಬಾ ದೊಡ್ಡ ನಿರೀಕ್ಷೆಯ ಜೊತೆಗೆ ಭರವಸೆಯನ್ನ ಹುಟ್ಟಿಸಿದೆ. ಸಲಗ ಮೇಕಿಂಗ್ ವಿಡಿಯೋದಲ್ಲಿರೋ ಫ್ಲೇವರ್ ಚಿತ್ರದ ಅಸಲಿಯತ್ತನ್ನ ತೋರಿಸ್ತಿದೆ. ಶ್ರೀಕಾಂತ್ ದುಬಾರಿಯಾಗಿ ಸಿನಿಮಾವನ್ನ ನಿರ್ಮಿಸಿರೋದು ಎದ್ಧು ಕಾಣ್ತಿದೆ. ದುನಿಯಾ ವಿಜಯ್ ಆಕ್ಟರ್ ಆಗಿ ಡೈರೆಕ್ಟರ್ ಆಗಿ ಡಬಲ್ ರೋಲ್ ಪ್ಲೇ ಮಾಡಿದ್ದು, ಮೇಕಿಂಗ್ ವಿಡಿಯೋನಲ್ಲಿ ವಿಜಯ್ ಸಿನಿಮಾ ಮೇಕಿಂಗ್ ಟೇಸ್ಟ್ ಹೈಲೈಟ್ ಆಗಿ ಕಾಣ್ತಿದೆ. ಮಾಸಿಗೆ ಮಾಸ್, ಕ್ಲಾಸಿಗೆ ಕ್ಲಾಸ್ ಆಗಿ ಸಿನಿಮಾ ಮೂಡಿ ಬಂದಿರುವಂತೆ ಕಾಣ್ತಿದೆ, ಎಸ್ಪೆಷಲ್ ಭೂಗತ ಲೋಕದ ಸೀನ್ಸ್, ಸ್ಟಂಟ್ಸ್ ಹೊಸ ಆಯಾಮದಲ್ಲಿ ಕಾಣ್ತಿದೆ. ಫ್ರೆಶ್ ಎನ್ನಿಸುವಂತೆ ಕಾಣ್ತಿದೆ. ಅದ್ರಲ್ಲೂ ವಿಶೇಷವಾಗಿ ಈ ಚಿತ್ರದ ಕ್ಯಾರೆಕ್ಟರ್ ಗಳು ಇಂಟ್ರೆಸ್ಟಿಂಗ್ ಆಗಿ ಅಟ್ರ್ಯಾಕ್ಟ್ ಮಾಡ್ತಿವೆ. ಮೇಕಿಂಗ್ ವಿಡಿಯೋ ತುಂಬೆಲ್ಲಾ ಬರೀ ಮಾಸ್ ಎಲಿಮೆಂಟ್ಸ್ ತುಂಬಿದ್ದು, ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಕೊಡೋ ಸೂಚನೆ ಕೊಡ್ತಿದೆ ಸಲಗ ಟೀಮ್.

ಚರಣ್ ರಾಜ್ ಸಂಗೀತದ ಝಲಕ್ ಮೇಕಿಂಗ್ ವಿಡಿಯೋದಲ್ಲೇ ಝೇಂಕರಿಸಿದೆ. ಈ ಚಿತ್ರದ ಕಥೆ,  ಮೇಕಿಂಗ್, ಸ್ಟಾರ್ ಕಾಸ್ಟ್ ಜೊತೆಗೆ ಮ್ಯೂಸಿಕ್ ಕೂಡ ತುಂಬಾ ದೊಡ್ಡ ರೋಲ್ ಪ್ಲೇ ಮಾಡ್ತಿದೆಯಂತೆ.  ನಾಯಕ, ನಿರ್ದೇಶಕ, ನಾಯಕಿ ಮತ್ತು ಕೆಲವರು ಬಿಟ್ಟರೇ, ಬಹುತೇಕ ಟಗರು ಟೀಮೇ ಈ ಚಿತ್ರಕ್ಕೂ ಕೆಲಸ ಮಾಡಿದ್ದು, ಒಂದು ದೊಡ್ಡ ಹಿಟ್ ಕೊಟ್ಟಿರೋ ತಂಡ ಅದೇ ರಿಧಮ್ ನಲ್ಲಿ ಅದಕ್ಕಿಂತ ಒಂದು ಪಟ್ಟು ಜಾಸ್ತಿ ಎಫರ್ಟ್ ಹಾಕಿ, ಅದಕ್ಕಿಂದ ಬೆಸ್ಟ್ ಪಿಚ್ಚರ್ ಮಾಡೋ ಪ್ರಯತ್ನ ಮಾಡಿದೆ. ಅದು ಮೇಕಿಂಗ್ ವಿಡಿಯೋದಲ್ಲಿ ಕಾಣ್ತಿದೆ ಕೂಡ. ಅಂದ್ಹಾಗೆ ಮೇಕಿಂಗ್ ವಿಡಿಯೋ ರಿಲೀಸ್ ಮಾಡೋ ಮೂಲಕ ಅಧಿಕೃತವಾಗಿ ಪ್ರಚಾರ ಕಾರ್ಯ ಶುರುಮಾಡಿರೋ ಸಲಗ ಚಿತ್ರತಂಡ ಇಲ್ಲಿಂದ ಚಿತ್ರದ ಒಂದೊಂದೇ ವಿಶೇಷತೆಯನ್ನ, ಹಾಡುಗಳನ್ನ ರಿಲೀಸ್ ಮಾಡುತ್ತೆ ಪ್ರಚಾರವನ್ನ ಮುಂದುವರೆಸೋ ಧಾವಂತದಲ್ಲಿದೆ.

  • salaga1
  • salaga2
  • salaga3
  • salaga4
  • salaga5
  • salaga6
  • salaga7
ShareTweetSendShare

Discussion about this post

Related News

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ಕಾಂತಾರ ಚಿತ್ರದ ನಟನೆಗೆ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ : ಎರಡು ಪುರಸ್ಕಾರಗಳಿಗೆ  ಭಾಜನವಾದ ಕೆಜಿಎಫ್-೨

ishani rapper bigg boss contestant ask sorry to drone prathap

ಕ್ಷಮಿಸು ಬಿಡು ಪ್ರತಾಪ್ : ಡ್ರೋನ್ ಕ್ಷಮೆಯಾಚಿಸಿದ ಈಶಾನಿ

pavithra lokesh

ಮತ್ತೆ ಕನ್ನಡ ಕಿರುತೆರೆಗೆ ಪವಿತ್ರಾ ಲೋಕೇಶ್ Pavithra lokesh ಎಂಟ್ರಿ

ಬಹು ಬೇಡಿಕೆಯ ನಟಿಯಾಗುವತ್ತ ಆಪಲ್ ಕೇಕ್ ಖ್ಯಾತಿಯ ಶುಭ ರಕ್ಷಾ Shubha Raksha

ಬೃಂದಾವನ ಧಾರಾವಾಹಿ ಹಳೆಯ ಹೀರೋ ಬೇಕು ಅಂತಿದ್ದಾರೆ ವೀಕ್ಷಕರು

ನಾನ್ಯಾಕೆ ರಾಜ್ ಶೆಟ್ಟಿಗೆ ಕೈ ಕೊಟ್ಟೆ : ಅದ್ಭುತ ಅವಕಾಶವನ್ನ ಕಳೆದುಕೊಂಡ್ರ ರಮ್ಯಾ

ತನಿಷಾ ಕುಪ್ಪಂಡ (Tanisha Kuppanda) ಮೇಲೆ FIR : Bigg Boss ಮನೆಗೆ ನುಗ್ತಾರ ಪೊಲೀಸರು ?

ಸಂಗೀತಾ ಶೃಂಗೇರಿ ( sangeetha sringeri) ಸಾಧನೆಯ ಪಟ್ಟಿ ಇಲ್ಲಿದೆ ನೀನೇನು ಕಡಿದು ಗುಡ್ಡೆ ಹಾಕಿದ್ದೀಯಾ ಮಿಸ್ಟರ್ ಸ್ನೇಹಿತ್

Deep fake video : ಕೊನೆಗೂ ಮೌನ ಮುರಿದ ರಶ್ಮಿಕಾ ಮಂದಣ್ಣ

ಶ್ರೀಲೀಲಾ ರಶ್ಮಿಕಾಗೆ ಹಿನ್ನಡೆ  : ದೇವರಕೊಂಡ ಪ್ರಾಜೆಕ್ಟ್ ಗೆ ಸಾಕ್ಷಿ ವೈದ್ಯ  ಎಂಟ್ರಿ

ವೆಬ್ ಸ್ಟೋರಿಸ್

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
By Radhakrishna Anegundi
On Nov 13, 2023
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
By Radhakrishna Anegundi
On Nov 9, 2023
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
By Radhakrishna Anegundi
On Nov 4, 2023

Web Stories

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ
ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..?
ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು
ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • Advertise
  • About

© 2024 Torrent Spree - All Rights Reserved | Powered by Kalahamsa Infotech Pvt. ltd.

No Result
View All Result
  • ಟಾಪ್ ನ್ಯೂಸ್
  • ಟ್ರೆಂಡಿಂಗ್
  • ದಕ್ಷಿಣ ಕನ್ನಡ
  • ನ್ಯೂಸ್ ರೂಮ್
    • ರಾಜ್ಯ
    • ದೇಶ
    • ವಿದೇಶ
  • ಕ್ರೈಮ್
  • ಮನೋರಂಜನೆ
    • ಗಾಂಧಿ ಕ್ಲಾಸ್
    • ಸೀರಿಯಲ್ ಸಂತೆ
  • ಆರೋಗ್ಯ / ಆಹಾರ
  • ಕೃಷಿ
  • ಕ್ರೀಡಾಂಗಣ
  • ದೇವನುಡಿ
  • ಬೆಡ್ ರೂಮ್

© 2024 Torrent Spree - All Rights Reserved | Powered by Kalahamsa Infotech Pvt. ltd.

ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ
ಗೊರಕೆ ಕಾಟದಿಂದ ಬೇಸರವೇ.. ಮನೆ ಮದ್ದಿನಲ್ಲಿದೆ ಪರಿಹಾರ ಬಿಗ್ ಬಾಸ್ ತನಿಷಾ ಕುರಿತ ಶಾಕಿಂಗ್ ಸತ್ಯ ಸಂಗತಿ ಗೊತ್ತಾ..? ಎಲ್ಲಿ ಹೋದರು ಲಕ್ಷಣದ ನಾಯಕಿ ವಿಜಯಲಕ್ಷ್ಮಿ ದೇಹದಲ್ಲಿ ಈ ಸಮಸ್ಯೆ ಕಾಣಿಸಿಕೊಂಡರೆ ಅಪಾಯ : ನಿರ್ಜಲೀಕರಣದ 10 ಲಕ್ಷಣಗಳು ನಿದ್ದೆಗೆ ತೆರಳುವ ಮುನ್ನ ಈ ಆಹಾರಗಳನ್ನು ಸೇವಿಸಿ
  • ↓
  • ಗ್ರೂಪ್
  • ಗ್ರೂಪ್