ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಬಾಲಿವುಡ್ ನಟಿ ಪಾಯಲ್ ರೋಹಟ್ಗಿಯನ್ನು ಗುಜರಾತ್ ಪೊಲೀಸರು ಬಂಧಿಸಿದ್ದಾರೆ.
ವೈದ್ಯರಾಗಿರುವ ಪರಾಗ್ ಶಾ ಅನ್ನುವವರು ಅಹ್ಮದಾಬಾದ್ ಪೊಲೀಸ್ ಠಾಣೆಯಲ್ಲಿ ಪಾಯಲ್ ವಿರುದ್ಧ ದೂರು ದಾಖಲಿಸಿದ್ದರು. ಅಹ್ಮದಾಬಾದ್ನ ಹೌಸಿಂಗ್ ಸೊಸೈಟಿಯೊಂದರಲ್ಲಿ ಪರಾಗ್ ಸದಸ್ಯರಾಗಿದ್ದು ಇದೇ ಸೊಸೈಟಿಯಲ್ಲಿ ಪಾಯವ್ ಕೂಡಾ ಸದಸ್ಯೆ. ಅದ್ಯಾವುದೋ ಕಾರಣಕ್ಕೆ ಸೊಸೈಟಿಯ ವಾಟ್ಸಾಪ್ ಗ್ರೂಪ್ನಲ್ಲಿ ಪರಾಗ್ ಹಾಗೂ ಆ ಸೊಸೈಟಿಯ ಮುಖ್ಯಸ್ಥರ ವಿರುದ್ಧ ಪಾಯಲ್ ಕೆಟ್ಟ ಶಬ್ದ ಬಳಕೆ ಮಾಡಿದ್ದರು. ಮಾತ್ರವಲ್ಲದೆ ಬೆದರಿಕೆ ಹಾಕಿದ್ದರು. ಇದಾದ ಬಳಿಕ ಎಲ್ಲಾ ಪೋಸ್ಟ್ಗಳನ್ನು ಪಾಯಲ್ ಡಿಲೀಟ್ ಮಾಡಿದ್ದರು.
ಈ ವರ್ತನೆ ಪದೇ ಪದೇ ಮುಂದುವರಿದ ಹಿನ್ನಲೆಯಲ್ಲಿ ಪರಾಗ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತಿದ್ದರು. ಮಾತ್ರವಲ್ಲದೆ ಪಾಯಲ್ ಅಪಾರ್ಟ್ ಮೆಂಟ್ ನ ಇತರ ನಿವಾಸಿಗಳ ಜೊತೆಗೆ ಜಗಳವಾಡಿ ಬೆದರಿಕೆ ಹಾಕಿದ್ದೆ ಎನ್ನಲಾಗಿದೆ.

ಹಾಗಂತ ಪಾಯಲ್ ಗೆ ಇವೆಲ್ಲಾ ಹೊಸದಲ್ಲ ಈ ಹಿಂದೆ ಸಾಕಷ್ಟು ವಿವಾದಗಳ ಮೂಲಕ ಸುದ್ದಿಯಾಗಿದ್ದ ಇವರು, ಮಾಜಿ ಪ್ರಧಾನಿ ಜವಾಹರ್ಲಾಲ್ ನೆಹರು ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಸದ್ದು ಮಾಡಿದ್ದರು. ಈ ಸಂಬಂಧ 2019ರಲ್ಲಿ ಪಾಯಲ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಇವರ ವರ್ತನೆಯಿಂದ ಬೇಸತ್ತ ಟ್ವಿಟರ್ ಈಗಾಗಲೇ ಇವರ ಖಾತೆಯನ್ನೇ ಡಿಲೀಟ್ ಮಾಡಿದೆ.
Discussion about this post