ಇದೀಗ ಚಂದನವನದ ಅನೇಕ ಮಂದಿ ಕಿರುತೆರೆಯತ್ತ ಮುಖ ಮಾಡಿದ್ದಾರೆ. ಮೊದಲ ಬಾರಿಗೆ ತಾರಾ ಅವರು ರಾಜ ರಾಣಿ ಅನ್ನುವ ರಿಯಾಲಿಟಿ ಶೋವಿನ ತೀರ್ಪುಗಾರರಾಗಿ ಪಾಲ್ಗೊಂಡಿದ್ದಾರೆ. ಇದರ ಬೆನ್ನಲ್ಲೇ ಚಂದನವನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಲವು ಚಿತ್ರಗಳಿಗೆ ಸಹಿ ಹಾಕಿದ್ದು ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು. ಈ ನಡುವೆ ಪ್ರಜ್ವಲ್ ಕಿರುತೆರೆ ರಿಯಾಲಿಟಿ ಶೋ ಒಂದಕ್ಕೆ ಸಹಿ ಹಾಕಿದ್ದು, ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದಾರೆ. ಇದರ ಬೆನ್ನಲ್ಲೇ ಇದೀಗ ಹರಿಪ್ರಿಯಾ ಕೂಡಾ ರಿಯಾಲಿಟಿ ಶೋ ಒಂದರಲ್ಲಿ ಪಾಲ್ಗೊಳ್ಳಲಿದ್ದಾರೆ.
ಸ್ಟಾರ್ ಸುವರ್ಣವಾಹಿನಿಯಲ್ಲಿ ಪ್ರಸಾರವಾಗಲಿರುವ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರರಾಗಿ ಪ್ರಜ್ವಲ್ ಪಾಲ್ಗೊಳ್ಳುತ್ತಿದಾರೆ. ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಈ ನಡುವೆ ಇದೇ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮಕ್ಕೆ ಇನ್ನುಳಿದ ಇಬ್ಬರು ತೀರ್ಪುಗಾರರನ್ನು ವಾಹಿನಿ ಫೈನಲ್ ಮಾಡಿದ್ದು ಹರಿಪ್ರಿಯಾ ಮತ್ತೊಬ್ಬ ತೀರ್ಪುಗಾರರಾಗಿ ಪಾಲ್ಗೊಳ್ಳಲಿದ್ದಾರೆ. 2007ರಲ್ಲಿ ಬದಿ ಅನ್ನುವ ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟ ಹರಿಪ್ರಿಯಾ ಬಳಿಕ ಹಿಂತಿರುಗಿ ನೋಡಲಿಲ್ಲ. ಫ್ಲೈ, ಬೆಲ್ ಬಾಟಮ್ 2, ಲಗಾಮ್, ಪೆಟ್ರೋಮ್ಯಾಕ್ಸ್ ಹೀಗೆ ಸಾಲು ಸಾಲು ಸಿನಿಮಾಗಳು ಹರಿಪ್ರಿಯಾ ಕೈಯಲ್ಲಿದ್ದು, ಕೊರೋನಾ ಕಾರಣದಿಂದ ಹಲವು ಪ್ರಾಜೆಕ್ಟ್ ಗಳು ತಡವಾಗುತ್ತಿದೆ.

ಈ ನಡುವೆ ಸುವರ್ಣ ವಾಹಿನಿಯ ಡ್ಯಾನ್ಸ್ ಡ್ಯಾನ್ಸ್ ಕಾರ್ಯಕ್ರಮದ ತೀರ್ಪುಗಾರರಾಗಿ ಬರಲು ಒಪ್ಪಿರುವ ಹರಿಪ್ರಿಯಾ ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಮೊದಲ ಬಾರಿಗೆ ಕಿರು ತೆರೆಯಲ್ಲಿ ಫುಲ್ ಟೈಮ್ ಪಾಲು ಪಡೆಯಲಿದ್ದಾರೆ. ಇನ್ನು ಇದೇ ಕಾರ್ಯಕ್ರಮದ ಮತ್ತೊಬ್ಬ ತೀರ್ಪುಗಾರರಾಗಿ ಕೊರಿಯೋಗ್ರಾಫರ್ ಎ.ಹರ್ಷ ಅವರು ಆಯ್ಕೆಯಾಗಿದ್ದಾರೆ.

Discussion about this post