ಪುತ್ತೂರು : ಕ್ಯಾನ್ಸರ್ ಪೀಡಿತರಿಗಾಗಿ ಕೂದಲು ದಾನ ಮಾಡುವ ಒಳ್ಳೆಯ ಕೆಲಸಕ್ಕೆ ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಪ್ರೋತ್ಸಾಹ ಸಿಗಲಾರಂಭಿಸಿದೆ. ಮೊನ್ನೆ ಮೊನ್ನೆ ಬಿಗ್ ಬಾಸ್ ಮನೆಯಲ್ಲಿ ರಾಜೀವ್ ಕೂದಲು ದಾನ ಮಾಡುವ ಮೂಲಕ ಸುದ್ದಿಯಾಗಿದ್ದರು.
ಇದೀಗ ಗಾಯಕಿ ಅಖಿಲಾ ಪಜಿಮಣ್ಣು ತನ್ನ ತಲೆಕೂದಲನ್ನು ಕ್ಯಾನ್ಸರ್ ಪೀಡಿತರಿಗಾಗಿ ದಾನ ಮಾಡಿದ್ದಾರೆ. ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಬರೆದುಕೊಂಡಿರುವ ಅವರು ಒಳ್ಳೆಯ ಕೆಲಸವೊಂದಕ್ಕೆ ಕೈ ಜೋಡಿಸಿದ್ದೇನೆ. ನೀವು ಕೈ ಜೋಡಿಸಿ ಎಂದು ಮನವಿ ಮಾಡಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ನನ್ನ ಕೂದಲು ತುಂಬಾ ಉದ್ದ ಬೆಳೆದಿತ್ತು, ಹಾಗೇ ಸುಮ್ನೆ ಕಟ್ ಮಾಡೋ ಬದಲು ಏನಾದರೂ ಉಪಯೋಗ ಆಗ್ಲಿ ಅಂತಾ seeds of hope ಸಂಸ್ಥೆಗೆ ದಾನ ಮಾಡಿದ್ದೇನೆ ಅಂದಿದ್ದಾರೆ.
ಸೀಡ್ಸ್ ಆಫ್ ಹೋಪ್ ಹೆಸರಿನಲ್ಲಿ ಪುತ್ತೂರಿನ ಕೆಲ ವಿದ್ಯಾರ್ಥಿಗಳು ಸಮಾಜ ಸೇವೆಗೆ ಮುಂದಾಗಿದ್ದು, ಇದಕ್ಕೆ ಮುಳಿಯ ಸೇರಿದಂತೆ ವಿವಿಧ ಸಂಸ್ಥೆಗಳು ಕೈ ಜೋಡಿಸಿದೆ.
ಈಗಾಗಲೇ ಸಂಸ್ಥೆ 5 ಜನ ಕ್ಯಾನ್ಸರ್ ಪೀಡಿತರಿಗೆ ವಿಗ್ ಕೊಟ್ಟು ಸಹಾಯ ಮಾಡಿದೆ.
Discussion about this post