ಬಿಗ್ ಬಾಸ್ ಸೀಸನ್ 7
ಪ್ರಾರಂಭಕ್ಕೆ ಇನ್ನು 3 ದಿನಗಳು ಬಾಕಿ. ಈಗಾಗಲೇ ಸಂಭಾವ್ಯ ಅಭ್ಯರ್ಥಿಗಳು ಬ್ಯಾಗ್ ಪ್ಯಾಕ್
ಮಾಡಿಕೊಂಡಿದ್ದು, ಬಿಗ್ ಬಾಸ್ ನಿರ್ಮಾಣವಾಗಿರುವ ಬಿಡದಿ ಕಡೆಗೆ ಮುಖ ಮಾಡಿ ನಿಂತಿದ್ದಾರೆ.
ಆದರೆ ಬ್ಯಾಗ್ ಪ್ಯಾಕ್ ಮಾಡಿರುವ
ಮಂದಿ ಯಾರೆಲ್ಲ ಅನ್ನುವುದು ಇನ್ನೂ ಗೊತ್ತಾಗಿಲ್ಲ. ಅವರಂತೆ, ಇವರಂತೆ ಅನ್ನುವ ಹೆಸರುಗಳು ಮಾತ್ರ ಓಡಾಡುತ್ತಿದೆ.
ಈಗಾಗಲೇ ಕುರಿ ಪ್ರತಾಪ್ ಮತ್ತು ಪುಟ್ಟ ಗೌರಿ ಖ್ಯಾತಿಯ ರಂಜನಿ ರಾಘವನ್ ಬಿಗ್ ಮನೆಗೆ ಹೋಗುವುದು
ಖಚಿತ ಅನ್ನುತ್ತಿದ್ದಾರೆ. ಉಳಿದಂತೆ ಸಿಂಗರ್
ಹನುಮಂತ ಅವರ ಹೆಸರು ಕೂಡಾ ಕೇಳಿ ಬರುತ್ತಿದೆ.
ಈ ನಡುವೆ ಹಾಡುಗಾರರ ಕೆಟಗರಿಯಲ್ಲಿ
ಚಂದನ್ ಶೆಟ್ಟಿ ಮಟ್ಟಕ್ಕೆ ಮತ್ತೊಬ್ಬನನ್ನು ಬೆಳೆಸುವ ಸಲುವಾಗಿ ಕನ್ನಡದ ಮತ್ತೊಬ್ಬ ರ್ಯಾಪರ್
ಅಲೋಕ್ ಬಾಬು 100 ದಿನಗಳ ಕಾಲ ನಡೆಯುವ ಈ ರಿಯಾಲಿಟಿ ಶೋಗೆ ಹೋಗ್ತಾರೆ ಎಂಬ ಮಾತು
ಕೇಳಿಬರುತ್ತಿದೆ. ಸ್ಪರ್ಧಿಗಳು ಈ ಬಗ್ಗೆ ಮಾತನಾಡುವ ಹಾಗಿಲ್ಲ, ಹೀಗಾಗಿ ಅಲೋಕ್ ಬಿಗ್ ಮನೆಗೆ
ಹೋಗುತ್ತಾರೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಲು ಅಕ್ಟೋಬರ್ 13ರವರೆಗೆ ಕಾಯಬೇಕು.
ಈ ಹಿಂದಿನ ಸೀಸನ್ಗಳಲ್ಲಿ ಗಾಯಕರಾದ ಚಂದನ್ ಶೆಟ್ಟಿ, ಚೈತ್ರಾ, ನವೀನ್ ಸಜ್ಜು ಮುಂತಾದವರು ಭಾಗವಹಿಸಿದ್ದರು, ಈ ಬಾರಿ ಅಲೋಕ್ ಅವರು ಈ ಮನೆಗೆ ಹೋಗ್ತಾರಾ ಎಂಬ ಸಂದೇಹವಿದೆ.
Discussion about this post