ನವದೆಹಲಿ : 1998ರ ಬ್ಯಾಕಾಂಕ್ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ನಾಜಿ ಬಾಕ್ಸರ್ ಡಿಂಕೋ ಸಿಂಗ್ ನಿಧನ ಹೊಂದಿದ್ದಾರೆ. 42ರ ಹರೆಯದ ಅವರು 2017ರಿಂದ ಕ್ಯಾನ್ಸರ್ ವಿರುದ್ಧ ಹೋರಾಟ ನಡೆಸುತ್ತಿದ್ದರು.ಡಿಂಕೊ ಸಿಂಗ್ ಪತ್ನಿ ಹಾಗೂ ಪುತ್ರ ಪುತ್ರಿಯನ್ನು ಅಗಲಿದ್ದಾರೆ.
ಡಿಂಗ್ಕೊ ಸಿಂಗ್ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ವರ್ಷವೇ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು. ಇನ್ನು ಕ್ರೀಡಾ ಕ್ಷೇತ್ರದ ಸಾಧನೆಗಾಗಿ 2013ರಲ್ಲಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.

ಕಳೆದ ವರ್ಷ ಕೊರೋನಾ ಸೋಂಕಿಗೆ ತುತ್ತಾಗಿದ್ದ ಅವರು ಚೇತರಿಸಿಕೊಂಡಿದ್ದರು. ಆದರೆ ಕ್ಯಾನ್ಸರ್ ಅವರನ್ನೇ ಸೋಲಿಸಿತು.
ಮಣಿಪುರ ಮೂಲದ 10ರ ವಯಸ್ಸಿನಲ್ಲೇ ಸಬ್ ಜೂನಿಯರ್ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಗೆದ್ದಿದ್ದ ಡಿಂಕೊ ಸಿಂಗ್ ಭಾರತದ ಆಧುನಿಕ ಬಾಕ್ಸಿಂಗ್ ತಾರೆ ಅನ್ನುವ ಹೆಸರು ಗಳಿಸಿದ್ದರು.

ಡಿಂಕೋ ನಿಧನಕ್ಕೆ ಕ್ರೀಡಾ ಸಚಿವ ಕಿರಣ್ ರಿಜಿಜು ಸಂತಾಪ ಸೂಚಿಸಿದ್ದಾರೆ.
ಇನ್ನು ತನ್ನ ಸಾಧನೆಗೆ ಸ್ಫೂರ್ತಿಯಾಗಿದ್ದ ಡಿಂಕೋ ಸಿಂಗ್ ಅವರನ್ನು ನೆನಪಿಸಿಕೊಂಡಿರುವ ಮೇರಿ ಕೋಮ್, ಮಣಿಪುರದ ರಿಂಗ್ ನಲ್ಲಿ ಅವರು ಹೋರಾಡುವುದನ್ನು ನೋಡಲೆಂದೇ ನಾನು ಸಾಲಿನಲ್ಲಿ ನಿಲ್ಲುತ್ತಿದೆ. ಅವರು ನನಗೆ ಸ್ಫೂರ್ತಿಯಾಗಿದ್ದರು. ಈಗ್ಲೂ ಅವರೇ ನನ್ನ ಹಿರೋ, ಅವರನ್ನು ಕಳೆದುಕೊಂಡಿರುವುದು ದೊಡ್ಡ ನಷ್ಟ. ಜೀವನ ತುಂಬಾ ಅನಿರೀಕ್ಷಿತ ಎಂದು ಮೇರಿ ಕೋಮ್ ಸಂತಾಪ ವ್ಯಕ್ತಪಡಿಸಿದ್ದಾರೆ.
1998ರಲ್ಲಿ ಡಿಂಕೋ ಸಿಂಗ್ ಅವರನ್ನು ಭಾರತೀಯ ತಂಡಕ್ಕೆ ಸೇರಿಸಿಕೊಂಡಿರಲಿಲ್ಲ. ಆದರೆ ಆತ್ಮಹತ್ಯೆ ಬೆದರಿಕೆ ಒಡ್ಡಿದ ಬಳಿಕ ಅವರು ತಂಡಕ್ಕೆ ಪ್ರವೇಶ ಗಿಟ್ಟಿಸಿದ್ದರು. ಆದರೆ ರಿಂಗ್ ಗೆ ಇಳಿದವರೇ ತಮ್ಮ ಸಾಮರ್ಥ್ಯ ತೋರಿಸಿದ್ದು ಮಾತ್ರವಲ್ಲ, ಭಾರತದ ಬಾವುಟವನ್ನು ಮುಗಿಲೆತ್ತರ ಹಾರಿಸಿದ್ದರು.
Discussion about this post