ಬಿಗ್ ಬಾಸ್ ಸೀಸನ್ 8 ಕೊನೆಯ ಹಂತಕ್ಕೆ ಬಂದು ತಲುಪಿದೆ. ಕಿಚ್ಚ ಸುದೀಪ್ ಫಿನಾಲೆ ವೇದಿಕೆ ಹತ್ತಿದ್ದು, ಕೆಲವೇ ಗಂಟೆಗಳಲ್ಲಿ ಇಬ್ಬರು ಸ್ಪರ್ಧಿಗಳನ್ನು ಎಲಿಮಿನೇಷನ್ ಮಾಡಲಿದ್ದಾರೆ. ದಿವ್ಯಾ ಉರುಡುಗ ಹಾಗೂ ಪ್ರಶಾಂತ್ ಸಂಬರಗಿ ಮನೆಯಿಂದ ಹೊರ ಹೋಗ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.

ಈ ನಡುವೆ ಈ ಬಾರಿಯ ಬಿಗ್ ಬಾಸ್ ನಲ್ಲಿ ಮಹತ್ವದ ಬದಲಾವಣೆಗಳನ್ನು ತರಲಾಗಿದೆ. ಅದರಲ್ಲೂ ವಿಜೇತರಿಗೆ ಸಿಗುವ ಬಹುಮಾನದ ಮೊತ್ತದಲ್ಲಿ ಬ್ರೇಕಿಂಗ್ ಸುದ್ದಿಯನ್ನು ಕಿಚ್ಚ ಸುದೀಪ್ ಕೊಟ್ಟಿದ್ದಾರೆ. ಈ ಬಾರಿ ಬಿಗ್ ಬಾಸ್ ವಿಜೇತರಿಗೆ 50 ಲಕ್ಷದ ಬದಲು 53 ಲಕ್ಷ ಹಣವನ್ನು ನೀಡಲಾಗುತ್ತದೆ.

ಇನ್ನು ರನ್ನರ್ ಅಪ್ ಆದವರಿಗೆ 11 ಲಕ್ಷ, ಮೂರನೇ ಸ್ಥಾನ ಪಡೆದವರಿಗೆ 6 ಲಕ್ಷ, ನಾಲ್ಕನೇ ಸ್ಥಾನ ಪಡೆದವರಿಗೆ 3.5 ಲಕ್ಷ ಮತ್ತು ಐದನೇ ಸ್ಥಾನ ಪಡೆದವರಿಗೆ 2.5 ಲಕ್ಷ ಬಹುಮಾನ ಸಿಗಲಿದೆ.

ಕನ್ನಡ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಮೊತ್ತದ ಬಹುಮಾನ ಘೋಷಣೆಯಾಗಿದ್ದು, ಟಾಪ್ 5 ಸ್ಪರ್ಧಿಗಳೆಲ್ಲರಿಗೆ ಲಕ್ಷ ಲಕ್ಷ ಗಣ ಸಿಗಲಿದೆ.
Discussion about this post