ಬೆಳ್ತಂಗಡಿ : ಚಲಿಸುತ್ತಿದ್ದ ಆಟೋ ಮೇಲೆ ಮರವೊಂದು ಉರುಳಿ ಬಿದ್ದ ಘಟನೆ ತಣ್ಣೀರು ಪಂತದ ಕರಾಯ ಮುಖ್ಯರಸ್ತೆಯಲ್ಲಿ ನಡೆದಿದೆ.

ಕರಾಯ ಉಪ್ಪಿನಂಗಡಿ ರಸ್ತೆಯಲ್ಲಿ ಆಟೋ ಚಲಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಗಾಳಿಯ ರಭಸಕ್ಕೆ ಮರ ಉರುಳಿ ಬಿದ್ದಿದೆ. ಘಟನೆ ಅದೃಷ್ಟ ಅನ್ನುವಂತೆ ಆಟೋ ಚಾಲಕ ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Discussion about this post