ಚಂದನವನದಲ್ಲಿ ಈ ಬಾರಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ವಿಪರೀತ. ಒಂದೇ ದಿನ 10 ಚಿತ್ರಗಳು ತೆರೆಗೆ ಬಂದಿತ್ತು. ಲೆಕ್ಕಕ್ಕೇ ನಾವು 6 ಕೋಟಿ ಮಂದಿ ಇದ್ದರೂ ಅದರಲ್ಲಿ ಕನ್ನಡ ಚಿತ್ರ ನೋಡುವ ಮಂದಿ ಎಷ್ಟು ಕೋಟಿ ಅನ್ನುವ ಲೆಕ್ಕ ಯಾರ ಬಳಿಯೂ ಇಲ್ಲ.
ಈ ಪ್ರಸ್ತಾಪ ಯಾಕಂದ್ರೆ ಈ ಬಾರಿ ಲೆಕ್ಕವಿಲ್ಲದ್ದ ಕನ್ನಡ ಚಿತ್ರಗಳು ಬಿಡುಗಡೆಯಾದರೂ ಬೆಸ್ಟ್ ವಿಲನ್ ಯಾರೂ ಎಂದು ಹುಡುಕಾಡಲು ಪರದಾಡಬೇಕಾಯ್ತು. ಹಾಗೋ ಹೀಗೋ ಮೂರು ಮಂದಿ ಹೆಸರನ್ನು ನಾವು ಸೂಚಿಸಿದ್ದೇವೆ.
ಇನ್ನು ಕೆಲ ಮಂದಿಯ ಹೆಸರುಗಳು ನಮ್ಮ ಕಣ್ತಪ್ಪಿನಿಂದ ತಪ್ಪಿರಬಹುದು. ಹೀಗಾಗಿ ತಾವುಗಳು ದಯವಿಟ್ಟು ನಿಮಗೆ ಇವರು ಬೆಸ್ಟ್ ವಿಲನ್ ಅನ್ನಿಸಿದ್ರೆ ಕಮೆಂಟ್ ಮಾಡಿ.
ಈಗ ನಟ ಸಾರ್ವಬೌಮ ಚಿತ್ರದಿಂದ ರವಿಶಂಕರ್, ಭರಾಟೆಯಿಂದ ಸಾಯಿಕುಮಾರ್ ಹಾಗೂ ಕವಲು ದಾರಿಯಿಂದ ಸಂಪತ್ ಕುಮಾರ್ ಹೆಸರನ್ನು ನಾವು ಸೂಚಿಸಿದ್ದೇವೆ. ಬೇರೆ ಹೆಸರುಗಳನ್ನು ಸೇರಿಸುವ ಜವಬ್ದಾರಿಯನ್ನು ಓದುಗರಾದ ನಿಮಗೆ ಬಿಡುತ್ತಿದ್ದೇವೆ.
Discussion about this post