ಬಿಗ್ ಬಾಸ್ ಕಾರ್ಯಕ್ರಮ ಅಂದ ಮೇಲೆ ಅಲ್ಲೊಂದು ಗಲಾಟೆ, ಕ್ಯೂಟ್ ಲವ್ ಸ್ಟೋರಿ, ಕಿಸ್ಸಿಂಗ್, ಮಿಸ್ಸಿಂಗ್,ಹಗ್ಗಿಂಗ್ ಹಗಿಂಗ್ ಇವೆಲ್ಲಾ ಇರಲೇಬೇಕು.
ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಬ್ರೋಗೌಡ ಲವ್ವರ್ ಬಾಯ್ ಆಗಿ ಹೊರ ಹೊಮ್ಮುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.
ಬಿಗ್ ಬಾಸ್ ಮನೆ ಪ್ರವೇಶಿಸುವ ವೇಳೆಯೇ 100 ದಿನಗಳ ಕಾಲ ನಿಲ್ಲುವುದು ಹೇಗೆ ಎಂದು ಪ್ಲಾನ್ ಮಾಡಿಯೇ ಬ್ರೋಗೌಡ ಮನೆಯೊಳಗೆ ಹೋದಂತೆ ಕಾಣಿಸುತ್ತಿದೆ. ಅದರಂತೆ ಅದೃಷ್ಟವೂ ಅವರ ಕೈ ಹಿಡಿದಿದೆ.
ಮೊದಲ ಸಲವೇ ಕ್ಯಾಪ್ಟನ್ ಪಟ್ಟವನ್ನು ಅಲಂಕರಿಸಿರುವ ಅವರು ಇದೀಗ ಲವ್ವರ್ ಬಾಯ್ ಆಗಲು ಹೊರಟಿದ್ದಾರೆ.
ನಿರ್ಮಲಾ ಮತ್ತು ಭಾರತಿ ಭಟ್ ಕ್ಯಾಪ್ಟನ್ ಗೆ ಗಿಫ್ಟ್ ಕೊಡಲು ಬಂದ ಸಂದರ್ಭದಲ್ಲಿ ಬ್ರೋಗೌಡ ಬಿಗ್ ಬಾಸ್ ಮನೆಯಲ್ಲಿ ಹುಡುಗಿಯೊಬ್ಬಳನ್ನು ಪಟಾಯಿಸಲು ಪ್ರಯತ್ನಿಸುತ್ತಿದ್ದಾರೆ.
ಈ ಮೂಲಕ ಮಹಾಮನೆಯಲ್ಲಿ ಒಂದಿಷ್ಟು ದಿನ ಉಳಿದುಕೊಳ್ಳುವ ಯೋಜನೆ ಮಾಡಿದ್ದಾರೆ.
ಹಾಗಾದ್ರೆ ಬ್ರೋಗೌಡರ ಮನದನ್ನೇ ಯಾರು ಅನ್ನುವುದೇ ದೊಡ್ಡ ಪ್ರಶ್ನೆ. ದಿವ್ಯಾ ಉರುಡುಗ, ಟಿಕ್ ಟಾಕ್ ಸ್ಟಾರ್ ಧನುಶ್ರೀ ಹಾಗೂ ನಟಿ ದಿವ್ಯ ಸುರೇಶ್ ಬಗ್ಗೆ ಅವರು ಒಲವು ತೋರಿದಂತಿದೆ.

ದಿವ್ಯ ಸುರೇಶ್ ನಟ ರಾಕೇಶ್ ಅಡಿಗ ಅವರೊಂದಿಗೆ ಈಗಾಗಲೇ ಎಂಗೇಜ್ ಆಗಿದ್ದಾರೆ. ಹೀಗಾಗಿ ದಿವ್ಯಾ ಉರುಡುಗ, ಟಿಕ್ ಟಾಕ್ ಸ್ಟಾರ್ ಧನುಶ್ರೀ ಪೈಕಿ ಯಾರು ಬ್ರೋಗೌಡ ಎಸೆದಿರುವ ಪ್ರೇಮ ಪಾಶಕ್ಕೆ ಸಿಲುಕುತ್ತಾರೆ ಅಂತಾ ನೋಡಬೇಕು
Discussion about this post